ಇಂದು ಸಂಜೆ ಸೋಣಂಗೇರಿಯಲ್ಲಿ ಮೋಹನ್ ಸೋನ ನೆನಪು ಕಾರ್ಯಕ್ರಮ

0

ಪ್ರಸಿದ್ಧ ಚಿತ್ರಕಲಾವಿದ ಮೋಹನ ಸೋನ ಅವರ ನೆನಪು ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಇಂದು ಸಂಜೆ ಜರುಗಲಿದೆ.

ಮೋಹನ ಸೋನ ಅವರ ತೃತೀಯ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಸೋನ ನಿವಾಸದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರು ಮೋಹನ ಸೋನ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ದೇವಾನಂದ ಗಾಂವ್ಕರ್ ಅವರ ಹಾಡುಗಳು ನಡೆಯಲಿದ್ದು, ಮೋಹನ ಸೋನ ಆರ್ಟ್ ಗ್ಯಾಲರಿಯಲ್ಲಿ ಮೋಹನ ಸೋನ ಹಾಗೂ ಕಲಾವಿದ ಸುದೇಶ್ ಮಹಾನ್ ಅವರ ಚಿತ್ರಗಳ ಪ್ರದರ್ಶನ ಹಾಗೂ ಕಲಾವಿದೆ ಆದ್ಯಾ ರಾಜೇಶ್ ಮಹಾನ್ ಅವರ ಕಲೆಗಳ ಪ್ರದರ್ಶನ ನಡೆಯಲಿದೆ.