ಮೂವಪ್ಪೆ ಅಂಗನವಾಡಿ ಕೇಂದ್ರಕ್ಕೆ ಕನ್ನ : ಮಕ್ಕಳ ಆಹಾರ ಕಳವು

0

ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು ಮಕ್ಕಳ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದಿರುವ ಘಟನೆ ವರದಿಯಾಗಿದೆ.
ಅ.19 ರಂದು ರಾತ್ರಿ ಮೂವಪ್ಪೆ ಅಂಗನವಾಡಿಯ ಹಂಚು ತೆಗೆದು ಒಳಕ್ಕಿಳಿದ ಕಳ್ಳರು ಸುಮಾರು 9,690 ರೂ. ಮೌಲ್ಯದ ಮಕ್ಕಳ ಆಹಾರ ಸಾಮಾಗ್ರಿ ಹೊತ್ತೊಯ್ದಿದ್ದಾರೆ. ಮರುದಿನ ಈ ವಿಚಾರ ಗಮನಕ್ಕೆ ಬಂದ ಮೇಲೆ ಕಾರ್ಯಕರ್ತೆ ಮೋಹಿನಿಯವರು ಇಲಾಖೆಗೆ ಮಾಹಿತಿ ನೀಡಿ ಬಳಿಕ ಪೋಲೀಸ್ ದೂರು ನೀಡಿದರು. ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.