ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ

0

ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಅನುಸರಿಸಲು ಸೂಚನೆ
         

ಸುಳ್ಯ ಪೊಲೀಸ್ ಠಾಣೆಯಿಂದ  ಸಾರ್ವಜನಿಕರಿಗೆ ಪ್ರಕಟಣೆಯೊಂದನ್ನು  ಹೊರಡಿಸಲಾಗಿದೆ.
  ಅದು ಹೀಗಿದೆ, “ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಗ್ರಾಮದ ನಾಗರೀಕರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ತಾವುಗಳು ತಮ್ಮಮನೆಯಿಂದ ಹೊರ ಪ್ರದೇಶಗಳಿಗೆ/ಪರ  ಊರುಗಳಿಗೆ ತೆರಳುವ ಸಮಯ ಮನೆಗೆ ಲಾಕರ್ ಹಾಕಿಕೊಂಡು ತಪ್ಪದೇ ಅಕ್ಕ ಪಕ್ಕದ ಮನೆಗಳಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ತಿಳಿಸಿ ಹೊರಡುವುದು ಹಾಗೂ ಮನೆಯ ಬಾಗಿಲುಗಳಿಗೆ ಬೀಗವನ್ನು ಹಾಕದೇ ಡೋರ್  ಲಾಕರ್ ಗಳನ್ನು ಅಳವಡಿಸಿಕೊಳ್ಳುವುದು. ತಾವು ಮನೆ ಬಿಟ್ಟು ಹೊರಡುವ ಸಮಯ ತಾವು ಮನೆಯನ್ನು ಬಿಟ್ಟು ಹೊರಡುತ್ತಿರುವ ಬಗ್ಗೆ ತಮ್ಮ ತಮ್ಮ ಗ್ರಾಮದ ಬೀಟ್ ಪೊಲೀಸ್ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ತೆರಳುವುದು. ಹೊರಡುವ ಮುಂಚೆ ಪ್ರತಿದಿನ ಮನೆಗೆ ಹಾಕಲಾಗುವ ಪತ್ರಿಕೆ, ಹಾಲು, ಕರೆಂಟ್ ಬಿಲ್,ಕೋರಿಯರ್ ಇತ್ಯಾದಿಗಳನ್ನು ತಾವು ವಾಪಾಸ್ ಬರುವವರೆಗೆ ಹಾಕದಂತೆ ತಿಳಿಸುವುದು. ತಪ್ಪದೇ ಚಿನ್ನ, ವಡವೆಗಳನ್ನು ಅಗತ್ಯಕ್ಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರ್ ಗಳಲ್ಲಿ ಇಡುವಂತೆ ಕೋರಿಕೆ.ಯಾರಾದರೂ ತಮ್ಮ ಗ್ರಾಮಗಳಲ್ಲಿ ಅಪರಿಚಿತ /ಅನುಮಾನಾಸ್ಪದ ವ್ಯಕ್ತಿಗಳು ಕಂಡುಬoದರೆ ಕೂಡಲೇ ಬೀಟ್ ಪೊಲೀಸ್ ರಿಗಾಗಲಿ ಅಥವಾ ತುರ್ತು ಕರೆ 112 ನಂಬರ್ ಗಾಗಲಿ ಕೂಡಲೇ ಕರೆಮಾಡಿ ತಿಳಿಸುವುದು.ರಾತ್ರಿ ವೇಳೆ ಮನೆಯ ಸುತ್ತ ಮುತ್ತ ಸಾಕಷ್ಟು ವಿದ್ಯುತ್ ಬೆಳಕು ಇರುವಂತೆ ನೋಡಿಕೊಳ್ಳುವುದು.  ಮನೆಯ ಸುತ್ತ ಮುತ್ತ CCTV  ಕ್ಯಾಮರಾ ಗಳನ್ನು ಅಳವಡಿಸಿಕೊಳ್ಳುವುದು. ಇತರೆ ಅಗತ್ಯ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ಕಳ್ಳತನ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಸುಳ್ಯ ಪೊಲೀಸ್ ಠಾಣೆ /ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸುವಂತೆ ಪೊಲೀಸ್ ಉಪ ನಿರೀಕ್ಷಕರು                 ತಿಳಿಸಿದ್ದಾರೆ.