ಮೇನಾಲ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಅ.೨೦ರಂದು ನಡೆಯಿತು.
ಬೆಳಗ್ಗೆ ಗಣಹೋಮ ಮತ್ತು ನಾಗ ತಂಬಿಲ, ಗುಳಿಗ ತಂಬಿಲ ನಡೆಯಿತು. ಮಧ್ಯಾಹ್ನ ಹೂವಿನಪೂಜೆ, ಮಹಾಪೂಜೆ ಮತ್ತು ಅನ್ನದಾನ ನಡೆಯಿತು. ರಾತ್ರಿ ಭಜನಾ ಕಾರ್ಯಕ್ರಮದ ಬಳಿಕ ಮಹಾಪೂಜೆ ಮತ್ತು ದೇವಿ ಸೇವೆ ಅನ್ನದಾನ ನಡೆಯಿತು.


ಮಧ್ಯಾಹ್ನ ಮತ್ತು ರಾತ್ರಿ ನೂರಾರು ಭಕ್ತರು ಆಗಮಿಸಿ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಅನ್ನ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮಿಗಳು ಪೂಜಾ ಕಾರ್ಯವನ್ನು ನೆರವೇರಿಸಿದರು.