ನಾಳೆ ಹಾಗೂ ನಾಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ

0

ಬ್ಯಾಂಡ್, ವಾದ್ಯದೊಂದಿಗೆ ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣಕ್ಕೆ ಹಸಿರು ಕಾಣಿಕೆ ಮೆರವಣಿಗೆ

ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಕ್ರೀಡಾ ವಿಕ್ರಮ-೨೦೨೩ ಅ.೨೬ ಹಾಗೂ ಅ.೨೭ರಂದು ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಕ್ರೀಡಾಂಗಣ ಕೊಡಿಯಾಲಬೈಲು ಇಲ್ಲಿ ನಡೆಯಲಿದೆ.

ಈ ಪ್ರಯುಕ್ತ ಇಂದು ಬ್ಯಾಂಡ್, ವಾದ್ಯದ ಮೂಲಕ ಸೈಂಟ್ ಬ್ರಿಜಿಡ್ ಶಾಲೆಯಿಂದ ಜೋಸೆಫ್ ಶಾಲೆಗೆ ಹಸಿರು ಕಾಣಿಗೆ ತಂದು ಕ್ರೀಡಾ ಮೈದಾನಕ್ಕೆ ಮೆರವಣಿಗೆಯ ಮೂಲಕ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚ್ ಧರ್ಮಗುರುಗಳಾದ ರೆ|ಫಾ ವಿಕ್ಟರ್ ಡಿಸೋಜಾ, ಪಾಲನ ಪರಿಷತ್ ಸೈಂಟ್ ಬ್ರಿಜಿಡ್ಸ್ ಚರ್ಚ್ ಸುಳ್ಯ ಇದರ ಉಪಾಧ್ಯಕ್ಷ ನವೀನ್ ಮಚಾದೋ, ಸಿಸ್ಟರ್‌ಗಳಾದ ಆ್ಯಂಟನಿ ಮೇರಿ, ಕ್ರೇಸಿ, ಮಿಥಿಲ್ಡ, ಶಾಲಾ ಶಿಕ್ಷಕರು, ಆಡಳಿತ ಸಿಬ್ಬಂದಿ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

ಕ್ರೀಡಾಕೂಟವು ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ಮತ್ತು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಜ್ ಅನುದಾನಿತ ಹಿ.ಪ್ರಾ.ಶಾಲೆ, ಸುಳ್ಯ ಇವರ ಸಹಯೋಗದಲ್ಲಿ ನಡೆಯಲಿದೆ.