ಅ.29 : ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ ಆಶ್ರಯದಲ್ಲಿ ಮುಕ್ತ ರಸ್ತೆ ಓಟ ಸ್ಪರ್ಧೆ

0

ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ ಆಶ್ರಯದಲ್ಲಿ ಅ.29ರಂದು ಸುಳ್ಯದಲ್ಲಿ ರಸ್ತೆ ಓಟ ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ.

ಪುರುಷರ ಮುಕ್ತ ರಸ್ತೆ ಓಟ ಸ್ಪರ್ಧೆ ಅರಂತೋಡಿನಿಂದ, ಮಹಿಳೆಯರಿಗೆ ಪೆರಾಜೆಯಿಂದ, 17 ವರ್ಷ ಕೆಳಗಿನ ಬಾಲಕರ ಹಾಗೂ 17 ವರ್ಷ ಕೆಳಗಿನ ಬಾಲಕಿಯರಿಗೆ ಅರಂಬೂರಿನಿಂದ ಓಟ ಸ್ಪರ್ಧೆ ಆರಂಭಗೊಳ್ಳುವುದು. ಹೆಚ್ಚಿನ ಮಾಹಿತಿಗೆ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಸುಳ್ಯ ಇದರ ಸಂಘಟಕರನ್ನು ಸಂಪರ್ಕಿಸಬಹುದಾಗಿದೆ. ಸ್ಪರ್ಧೆಯ ವಿಜೇತರಿಗೆ ನಗದು ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ.