ಪಂಜ ಪರಿಸರದಲ್ಲಿ ಭಾರಿ ಗಾಳಿ ಮಳೆ

0


ಪಂಜ- ಕಡಬ ರಸ್ತೆಯ ಎರಡು ಕಡೆ ಮರ ಉರುಳಿ ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿ

ಭಾರಿ ಗಾಳಿ ಮಳೆಗೆ ಪಂಜ ಕಡಬ ರಸ್ತೆಯ ಕಂರ್ಬು ನೆಕ್ಕಿಲ ಎಂಬಲ್ಲಿ ಎರಡು ಮರಗಳು ರಸ್ತೆ ಉರುಳಿದ್ದು ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ನ.3 ರಂದು ಸಂಜೆ ವರದಿಯಾಗಿದೆ.


ಒಂದು ಭಾರಿ ಗಾತ್ರದ ಮರ ಮತ್ತು ಅದರ ಸಮೀಪವೇ ಇನ್ನೊಂದು ಮರ ರಸ್ತೆ ಹಾಗೂ ವಿದ್ಯುತ್ ಲೈನ್ ಮೇಲೆ ಉರುಳಿದ್ದು ವಿದ್ಯುತ್ ತಂತಿ, ಕಂಬಗಳು ಮುರಿದಿದೆ.

ಸ್ಥಳೀಯರು ಸಹಕಾರದಿಂದ ಮರಗಳನ್ನು ತೆರವು ಗೊಳಿಸಲಾಯಿತು. ಪಂಜ ಪರಿಸರದಲ್ಲಿ ಆಲಿಕಲ್ಲು , ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದ್ದು ಕೆಲವು ಕಡೆ ಕೃಷಿ ತೋಟಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.


ಕೆಲವು ಕಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಕೃತಕ ನೆರೆ ಉಂಟಾಗಿದೆ.