ಪೆರುವಾಜೆ ಪ್ರಥಮ ದರ್ಜೆ ಕಾಲೇಜಿನಲ್ಲಿ “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ” ಕುರಿತು ಕಾರ್ಯಾಗಾರ

0

ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಶಿಷ್ಟ ಪಂಗಡ ಘಟಕದ ವತಿಯಿಂದ “ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ” ಕುರಿತು ಕಾರ್ಯಗಾರ ನಡಯಿತು. ಕಾಲೇಜಿನ. ಪ್ರಾಂಶುಪಾಲರಾದ ದಾಮೋದರ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ಯಾಮ್ ಪ್ರಸಾದ್ ಎಂ. ಅರ್.ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಹಲವು ಬಗೆಯಲ್ಲಿ ತಯಾರಿಗೊಳ್ಳುವ ಕುರಿತು ವಿವರಿಸಿದರು.

ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಆದ ಶೀಮತಿ ಸುನೀತ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸುತ್ತಾ ಪ್ರತಿನಿತ್ಯ ಸಣ್ಣ ಸಣ್ಣ ಬೆಳವಣಿಗೆ ತರುವ ಹವ್ಯಾಸಗಳನ್ನು ತಮ್ಮಲ್ಲಿ ರೂಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಅನಿವಾರ್ಯದ ಕುರಿತು ವಿವರಿಸಿದರು.

IQAC ಸಂಯೋಜಕರಾದ ಶ್ರೀಮತಿ ಜ್ಯೋತಿ ಎಸ್. ಮತ್ತು ವಾಣಿಜ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಪವಿತ್ರ ಬಿ.ಉಪಸ್ಥಿತರಿದ್ದರು. ಕು ವಂದ್ಯ ತ್ರತೀಯ ಬಿ .ಕಾಂ ಕಾರ್ಯಕ್ರಮ ನಿರೂಪಿಸಿದರು.ಅಂತಿಮ ಬಿ ಕಾಮ್.ನ ಪ್ರಸನ್ನ ಸ್ವಾಗತಿಸಿ, ದ್ವಿ. ಬಿ. ಕಾಮ್.ನ ರೇಷ್ಮಾ ವಂದನಾರ್ಪಣೆ ಗೈದರು.ಪ್ರಥಮ ಬೀ. ಕಾಮ್ . ವಿದ್ಯಾರ್ಥಿನಿಯರಾದ ಕು.ಶ್ರಾವ್ಯ, ಕು.ಶ್ರೇಯಾ, ಮತ್ತು ಕು ಗೌಪ್ಯ ಪ್ರಾರ್ಥಿಸಿದರು.