ಬಾಳಿಲ ವಿದ್ಯಾಬೋಧಿನೀ ಹಿ ಪ್ರಾ. ಶಾಲೆಗೆ ರೈಟ್ ಟು ಲಿವ್ ಕೋಟೆ ಪೌಂಡೇಷನ್ ನಿಂದ ಶೌಚಾಲಯ ಕೊಡುಗೆ

0

ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ. ಶಾಲೆಗೆ ರೈಟ್ ಟು ಲಿವ್ ಕೋಟೆ ಪೌಂಡೇಷನ್ ನಿಂದ
ಸುಮಾರು ರೂ. 5
ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬಾಲಕಿಯರ ಶೌಚಾಲಯವನ್ನು ಹಸ್ತಾಂತರಿಸುವ ಕಾರ್ಯಕ್ರಮ ನ. 9ರಂದು ನಡೆಯಿತು.


ಅಹಾನ ಸಂಸ್ಥೆ ಬೆಂಗಳೂರು ಇವರು ರೈಟ್ ಟು ಲಿವ್ ಕೋಟೆ ಪೌಂಡೇಷನ್ ಮೂಲಕ ಶಾಲೆಗೆ 10 ಸುಸಜ್ಜಿತ ಶೌಚಾಲಯವನ್ನು ಕೊಡುಗೆ ನೀಡಿದ್ದರು. ರೈಟ್ ಟು ಲಿವ್ ಕೋಟೆ ಪೌಂಡೇಷನ್ ಸಮನ್ವಯ ಅಧಿಕಾರಿ ಪ್ರದೀಪ್ ಉಬರಡ್ಕ, ಶ್ರೀಮತಿ ಶಶಿಕಲಾ ಜಿ.ಕೆ ವನಶ್ರಿ ಪೆರುವಾಜೆ, ಕೋಟೆ ಫೌಂಡೇಶನ್ ನ ಸ್ಥಾಪಕ ರಘುರಾಮ್ ಕೋಟೆಯವರ ತಾಯಿ ಶ್ರೀಮತಿ ಪಾರ್ವತಿ ವಸಂತ‌ಕುಮಾರ್ ಕೋಟೆ, ಗಣಪಯ್ಯ ವನಶ್ರೀ ಪೆರುವಾಜೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯು. ರಾಧಾಕೃಷ್ಣರಾವ್, ನಿಕಟಪೂರ್ವ ಅಧ್ಯಕ್ಷ ವೆಂಕಟ್ರಮಣ ಭಟ್ ನೆಟ್ಟಾರು, ಶಾಲಾ ಸಂಚಾಲಕರಾದ ಪಿಜಿ.ಎಸ್.ಎನ್ ಪ್ರಸಾದ್, ಕೋಶಾಧಿಕಾರಿ ಕೈಂತಾಜೆ ರಾಮ್ ಭಟ್, ಎಸ್.ಡಿ.ಎಂ.ಸಿ. ಅಧ್ಯಕ್ಷ ರುಕ್ಮಯ್ಯ ನಾಯ್ಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರುಗಳಾದ ಕೃಷ್ಣಮೂರ್ತಿ ಸ್ವಾಗತಿಸಿ, ಶಿಕ್ಷಕಿ ಅನಿತಾ ಟಿ. ವಂದಿಸಿದರು. ಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.