ನೆಲ್ಲೂರು ಕೆಮ್ರಾಜೆ ಸೊಸೈಟಿ ಚುನಾವಣೆ

0

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ತೀರ್ವ ಕೂತೂಹಲ ಎಬ್ಬಿಸಿರುವ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಡಿ. 28ರಂದು ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

ಇಂದು ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸಾಮಾನ್ಯ 6 ಸ್ಥಾನಕ್ಕೆ ವಿಷ್ಣು ಭಟ್ ಮೂಲೆತೋಟ, ಶುಭಾಕರ ನಾಯಕ್ ಬೊಳ್ಳಾ ಜೆ, ವಿನಯಚಂದ್ರ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ಚಂದ್ರ ದಾಸನಕಜೆ, ಸತ್ಯೇಶ್ ಚಂದ್ರೋಡಿ, ಮಹಿಳಾ ಮೀಸಲು 2 ಸ್ಥಾನಕ್ಕೆ ಇಂದಿರಾ ಎರ್ಮೆಟ್ಟಿ, ಸಂಧ್ಯಾ ಕೆ. ಎಲ್. ಪುನುಕುಟ್ಟಿ, ಪ. ಜಾತಿ 1 ಸ್ಥಾನಕ್ಕೆ ಹರೀಶ್ ಸುಳ್ಳಿ, ಪ. ಪಂಗಡ 1 ಸ್ಥಾನಕ್ಕೆ ತೀರ್ಥಕುಮಾರ್ ತುಂಬೆತಡ್ಕ, ಹಿಂದುಳಿದ ಪ್ರ ವರ್ಗ ‘ಬಿ’ 1 ಸ್ಥಾನಕ್ಕೆ ಜಯಪ್ರಸಾದ್ ಸುಳ್ಳಿ, ಹಿಂದುಳಿದ ವರ್ಗ ‘ಎ’ 1 ಸ್ಥಾನಕ್ಕೆ ಉಮೇಶ್ ಪ್ರಭು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಡಿ. 20 ಕೊನೆಯ ದಿನವಾಗಲಿದೆ. ಡಿ. 21 ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ. 22 ನಾಮಪತ್ರ ಹಿಂತೆಗೆತಕ್ಕೆ ಅವಕಾಶವಿದೆ.