ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆ

0

ಸುಳ್ಯ ಶ್ರೀ ರಾಮ ಪೇಟೆಯ ಶ್ರೀರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆಯು ನ.23 ರಂದು ಪ್ರಾತ:ಕಾಲ ಆರಂಭಗೊಂಡಿತು.

ಪ್ರಾತಃಕಾಲ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮೊಕ್ತೇಸರ ಜಿತೇಂದ್ರ ಎನ್.ಎ ರವರು ದೀಪ ಸ್ಥಾಪನೆ ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು.
ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರು ಆಗಮಿಸಿ ಭಜನಾ ಸೇವೆಯಲ್ಲಿ ಪಾಲ್ಗೊಂಡರು.