ಕನಕಮಜಲು ಸಹಕಾರಿ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರನ್ನು ಡಿ.8ರಂದು ಸಂಘದ ಕನಕಮಜಲಿನ ಪ್ರದಾನ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನಿರ್ದೇಶಕರುಗಳಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶ್ರೀಕೃಷ್ಣ ಭಟ್ ನೆಡಿಲು, ಗಣೇಶ ಅಂಬಾಡಿಮೂಲೆ ಅಡ್ಕಾರು, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಭಾರತಿ ಪಿ‌.ಕೆ., ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ ಹಾಗೂ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.