ಸುಳ್ಯದಲ್ಲಿ ಐಸಿರಿ ಸಿಲ್ಕ್ & ಸಾರೀಸ್ ವಸ್ತ್ರ ಮಳಿಗೆ ಶುಭಾರಂಭ

0

ಸುಳ್ಯ ಕೆ ಎಸ್ ಆರ್ ಟಿ ಸಿ ಮುಂಭಾಗದಲ್ಲಿರುವ ಸುಳ್ಯ ಸೆಂಟರ್‌ನಲ್ಲಿ ಐಸಿರಿ ಸಿಲ್ಕ್ & ಸಾರಿಸ್ ವಸ್ತ್ರ ಮಳಿಗೆ ಇಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಉದ್ಘಾಟಿಸಿ, ಮಾತನಾಡಿ ಶುಭಹಾರೈಸಿದರು. ಹಾಗೂ ಎ.ಒ.ಎಲ್.ಇ.ಇದರ ನಿರ್ದೇಶಕಿ ಡಾ|ಐಶ್ವರ್ಯ, ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ರಾಧಾಕೃಷ್ಣ , ಸುಳ್ಯ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈರವರು ದೀಪ ಪ್ರಜ್ವಲಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿ ಮೌಲ್ಯಶ್ರೀ ಅವರ ತಂದೆ ಕೃಷ್ಣ,ತಾಯಿ ಶ್ರೀಮತಿ ವಾಣಿ ಸಹೋದರ ಗಗನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಮಳಿಗೆಯಲ್ಲಿ ಪುರುಷರ, ಮಹಿಳೆಯರ ವಿವಿಧ ವಿನ್ಯಾಸದ ವಿನೂತನ ಶೈಲಿಯ ಬಟ್ಟೆ ಬರೆಗಳು, ಎಲ್ಲಾ ತರಹದ ಸಾರಿಗಳು, ಡ್ರೆಸ್ ಮೆಟೀರಿಯಲ್ಸ್ ಗಳು, ರೆಡಿಮೆಡ್ ಬಟ್ಟೆಗಳು ಕಂಪೆನಿಯಿಂದ ನೇರ ಖರೀದಿ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.