ಕ್ರಮಕ್ಕಾಗಿ ಎಸ್.ಪಿ ಗೆ ಮನವಿ ಸಲ್ಲಿಸಲು ಶಾಲಾ ಎಸ್.ಡಿ.ಎಂ.ಸಿಯಿಂದ ನಿರ್ಧಾರ
ಕೊಲ್ಲಮೊಗ್ರದ ಬಂಗ್ಲೆಗುಡ್ಡೆ ಶಾಲೆಯ ಮಕ್ಕಳನ್ನು ಸಾರ್ವಜನಿಕ ರಸ್ತೆ ಬದಿ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ತಡೆದು ನಿಲ್ಲಿಸಿ ವಿಚಾರಿಸಿದ್ದು ಮಕ್ಕಳಲ್ಲಿ ಅಪಹರಣದ ಭಯ ಉಂಟಾದ ಪರಿಣಾಮ ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಪ್ರಗತಿಯಾಗಿಲ್ಲ ಎಂದು ಎಸ್. ಡಿ.ಎಂ.ಸಿ ಯವರು ಎಸ್. ಪಿ.ಗೆ ದೂರು ನೀಡಲು ನಿರ್ಣಯ ಮಾಡಿದ ಘಟನೆ ವರದಿಯಾಗಿದೆ.









ಡಿ.10 ರ ಸಂಜೆ ಬಂಗ್ಲೆಗುಡ್ಡೆ ಶಾಲೆಯ ಮೂರು ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಲ್ಲಿಗೆ ಮುಖ ಮುಚ್ಚಿ ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ಮಕ್ಕಳಿಗೆ ಅಪಹರಣದ ಭಯ ಹುಟ್ಟಿಸುವಂತೆ ವರ್ತಿಸಿದ್ದಾರೆ, ಅದೇ ಸಮಯಕ್ಕೆ ರಸ್ತೆಯಲ್ಲಿ ಕಾರೊಂದು ಬಂದ ಕಾರಣ ಅಪರಿಚಿತರು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಾಲಾ ವತಿಯಿಂದ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು 5 ದಿನ ಕಳೆದರೂ ಯಾವುದೇ ತನಿಖೆ ನಡೆದಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಎಸ್.ಡಿ.ಎಂ ಸಿ ಯವರು ಸಭೆ ಸೇರಿ ಸೂಕ್ತ ತನಿಖೆ ನಡೆಸಬೇಕಾಗಿ ಎಸ್.ಪಿ. ಯವರಿಗೆ ದೂರು ನೀಡಲು ನಿರ್ಧರಿಸುವುದಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಜಯಶ್ರೀ ಚಾಂತಾಳ ತಿಳಿಸಿದ್ದಾರೆ.










