ಪಂಜ: ಜೇಸಿ ಸಪ್ತಾಹ -2023: ಬೆಳ್ತಂಗಡಿ ಕಡಮ್ಮಾಜೆ ಫಾರ್ಮ್ಸ್ ನಲ್ಲಿ ವೀಕ್ಷಣೆ ಮತ್ತು ಮಾಹಿತಿ ಕಾರ್ಯಕ್ರಮ

0

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ 2023ರ ಎರಡನೇ ದಿವಸದ ಕಾರ್ಯಕ್ರಮ ‘ಕೃಷಿ ಕ್ಷೇತ್ರ ಭೇಟಿ’ ವೀಕ್ಷಣೆ ಮತ್ತು ಮಾಹಿತಿ ಕಾರ್ಯಕ್ರಮ ಡಿ.19 ರಂದು ಬೆಳ್ತಂಗಡಿ ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಜೇಸಿಐ ಪಂಜ ಪಂಚಶ್ರೀ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು.

.ಕಾರ್ಯಕ್ರಮವನ್ನು ಕಡಮ್ಮಾಜೆ ಫಾರ್ಮ್ಸ್, ಸಮಗ್ರ ಕೃಷಿಕರು ಶ್ರೀಮತಿ ಕುಸುಮ ದಿನಕರ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜೇಸಿಐ ವಲಯ 15 ರ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ , ಕಡಮ್ಮಾಜೆ ಫಾರ್ಮ್ಸ್, ಸಮಗ್ರ ಕೃಷಿಕ ದೇವಿ ಪ್ರಸಾದ್ ಕಡಮ್ಮಾಜೆ ,ಪರಿವಾರ ಪಂಜ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಹಾಗೂ ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ ಶಿವ ಪ್ರಸಾದ್ ಹಾಲೆಮಜಲು, ಸ್ಥಾಪಕಾಧ್ಯಕ್ಷ ದೇವಿ ಪ್ರಸಾದ್ ಜಾಕೆ , ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಿ ಪ್ರಸಾದ್ ಕಡಮ್ಮಾಜೆ ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಈ ವೇಳೆ ಶ್ರೀಮತಿ ಕುಸುಮ ದಿನಕರ ಗೌಡರನ್ನು ಸನ್ಮಾನಿಸಲಾಯಿತು


.
ಕಾರ್ಯಕ್ರಮದಲ್ಲಿ ಗುರು ಪ್ರಸಾದ್ ತೋಟ ವೇದಿಕೆಗೆ ಆಹ್ವಾನಿಸಿದರು. ಕಿರಣ್ ಕಂರ್ಬು ನೆಕ್ಕಿಲ ಜೇಸಿ ವಾಣಿ ವಾಚಿಸಿದರು. ಪ್ರವೀಣ ಕುಂಜತ್ತಾಡಿ, ಸೋಮಶೇಖರ ನೇರಳ, ಜೀವನ್ ಶೆಟ್ಟಿಗದ್ದೆ ಅತಿಥಿಗಳನ್ನು ಪರಿಚಯಿಸಿದರು.ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವಂದಿಸಿದರು
.ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರುಗಳು,ಸದಸ್ಯರುಗಳು ಹಾಗೂ ಕೃಷಿಕ ಬಾಂಧವರು ಉಪಸ್ಥಿತರಿದ್ದರು.

ಡಿ.25 ರ ತನಕ ಸಪ್ತಾಹ:
ಡಿ.21.ರಂದು ಬಾಂಧವ್ಯ ಜೇಸಿ ಕುಟುಂಬ ಸಮ್ಮಿಲನವು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಲಿದೆ.

ಡಿ.23.ರಂದು ನಿಂತಿಕಲ್ಲು ಕೆ.ಎಸ್.ಗೌಡ ಸಮೂಹ ಸಂಸ್ಥೆಯಲ್ಲಿ
ಪದವಿಪೂರ್ವ ಕಾಲೇಜು ಆಯ್ದ
ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಕಾರ್ಯಾಗಾರ ನಡೆಯಲಿದೆ.

ಡಿ.24 ರಂದು ಬೆಳಿಗ್ಗೆ ಗಂಟೆ 10 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕ್ರೀಡೋತ್ಸವ ಜರುಗಲಿದೆ.550 ಕೆ.ಜಿ. 8 ಜನರ ಲೆವೆಲ್ ಮಾದರಿಯ ಪುರುಷರ ಹಗ್ಗಜಗ್ಗಾಟ ಜೇಸಿ ಟ್ರೋಫಿ -2023
ಪ್ರಥಮ ರೂ.15023 , ದ್ವಿತೀಯ ರೂ.10023, ತೃತೀಯ ಮತ್ತು ಚತುರ್ಥ ತಲಾ ರೂ.3023 ನಗದು ಬಹುಮಾನ ಹಾಗೂ ಜೇಸಿ ಟ್ರೋಫಿ ಇರುತ್ತದೆ.ಕೆಸರು ಗದ್ದೆಯಲ್ಲಿ ಸ್ಥಳೀಯ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಮನೋರಂಜನೆ ಆಟಗಳು, ಆಹ್ವಾನಿತ ತಂಡಗಳ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಕ್ರೀಡಾ ಕೂಟವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗೀಶ್ ಚಿದ್ಗಲ್ ರವರಿಗೆ ಸನ್ಮಾನ ನಡೆಯಲಿದೆ.

ಡಿ.25 ರಂದು ಸಂಜೆ ಗಂಟೆ 6.30ರಿಂದ ಸಮಾರೋಪ ಸಮಾರಂಭ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಗುರುಪ್ರಸಾದ್ ತೋಟ ರವರಿಗೆ ಕಮಲ ಪತ್ರ ಪ್ರಶಸ್ತಿ ಪುರಸ್ಕೃರ ನಡೆಯಲಿದ್ದು,ಜೇಸಿಐ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪುರಸ್ಕೃರಿಸಲಿದ್ದಾರೆ. ಮುಳಬಾಗಿಲು ಕೂತಾಂಡ್ಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ಕೆ.ವಿ ರವರು ಸನ್ಮಾನ ಸ್ವೀಕರಿಸಲಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು -ಚಿಲಿಂಬಿ ಊರ್ವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿ ಬಳಗ ದವರಿಂದ ಬೊಳ್ಳಿಮಲೆತ ಶಿವಶಕ್ತಿಲು ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ.