ಮರ್ಕಂಜ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಉಜ್ವಲ ಯೋಜನೆಯ ಆಯ್ದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಕಾರ್ಯಕ್ರಮ

0

ಸುಳ್ಯ ರೈತ ಉತ್ಪಾದಕ ಕಂಪನಿ ನಿಯಮಿತ, ತೋಟಗಾರಿಕಾ ಇಲಾಖೆ ಸುಳ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮರ್ಕಂಜ,
ಗ್ರಾಮ ಪಂಚಾಯತ್ ಮರ್ಕಂಜ
ಇದರ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಗಾರ
ಸುಳ್ಯ ರೈತ ಉತ್ಪಾದಕ ಕಂಪನಿ ಯ ಮರ್ಕಂಜ ಗ್ರಾಮದ ರೈತ ಆಸಕ್ತ ಗುಂಪುಗಳ ಸಭೆ ಮತ್ತು
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಆಯ್ದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣಾ ಕಾರ್ಯಕ್ರಮವು ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಭಾಭವನದಲ್ಲಿಡಿ.19 ರಂದು ನಡೆಯಿತು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಶಾಸಕಿ ಭಾಗೀರಥಿ ಮುರುಳ್ಯ ಸಭೆಯಲ್ಲಿ ಉಪ್ಥಿತರಿದ್ದರು.

ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಸುಳ್ಯ ತೋಟಗಾರಿಕೆ ಇಲಾಖೆಯ
ಸಹಾಯಕ ಅಧಿಕಾರಿ
ಅರಬಣ್ಣ ಪೂಜೇರಿ ಮಾಹಿತಿ ನೀಡಿದರು.

ರೈತ ಉತ್ಪಾದಕ ಕಂಪನಿಯ ಆಸಕ್ತ ರೈತ ಗುಂಪುಗಳ ಸಭೆಯನ್ನು ಸುಳ್ಯ ರೈತ ಉತ್ಪಾದಕ ಕಂಪನಿ ನಿಯಮಿತ
ಇದರ ಅಧ್ಯಕ್ಷ ವೀರಪ್ಪ ಗೌಡ ರವರು ನೆರವೇರಿಸಿದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕುಮಾರಿ ಭಾಗೀರಥಿ ಯವರು ವಿತರಿಸಿ ಉಜ್ಜಲ ಯೋಜನೆ ಮತ್ತು ಕೇಂದ್ರ ಸರ್ಕಾರದ ಯೋಜನೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ದೇಲಂಪಾಡಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮರ್ಕಂಜ, ಶ್ರೀಮತಿ ಸಂಧ್ಯಾ ಸೇವಾಜೆ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮರ್ಕಂಜ,ಮರ್ಕಂಜ ಪಂಚಾಯತ್ ಅಧ್ಯಕ್ಷ ಗೀತಾ ಹೊಸೋಳಿಕೆ ವಿದ್ಯಾಧರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಮರ್ಕಂಜ, ಗುರುರಾಜ್ ರಾವ್ ಕಾರ್ಯಕಾರಿ ಸಮಿತಿಯ ಸದಸ್ಯರು ಸುಳ್ಯ ರೈತ ಉತ್ಪಾದಕ ಕಂಪನಿ, ಗೋವಿಂದ ಎ ಕಾರ್ಯಕಾರಿ ಸಮಿತಿಯ ಸದಸ್ಯರು ಸುಳ್ಯ ರೈತ ಉತ್ಪಾದಕ ಕಂಪನಿ ಮತ್ತು ಸುಳ್ಯ ರೈತ ಉತ್ಪಾದಕ ಕಂಪನಿಯ ಸದಸ್ಯರು ಹಾಜರಿದ್ದರು.

ಗಣೇಶ್ ರೈ ಧನ್ಯವಾದ ಸಮರ್ಪಿಸಿದರು ಮತ್ತು ಹರೀಶ್ ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಳ್ಯ ರೈತ ಉತ್ಪಾದಕ ಕಂಪನಿ ಇವರು ಕಾರ್ಯಕ್ರಮ ನಿರ್ವಹಿಸಿದರು.