ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಹೋಗುವ ದಾರಿಯ ಬದಿಯಲ್ಲಿರುವ ಮುರಿದ ತೆಂಗಿನ ಮರ ಒಂದು ಅಪಾಯವನ್ನು ಆಹ್ವಾನಿಸುತ್ತಿದೆ.
ಸೋಣಂಗೇರಿ ಮಾರ್ಗವಾಗಿ ಸುಬ್ರಹ್ಮಣ್ಯ ಹೋಗುವ ರಸ್ತೆಗೆ ವಾಲಿರುವ ಈ ತೆಂಗಿನ ಮರವು ಬೀಳುವ ಹಂತದಲ್ಲಿದೆ.
ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಈ ಕಡೆ ಗಮನಹರಿಸಿ ಅಪಾಯ ಸಂಭವಿಸುವ ಮೊದಲು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.