ಡಿ.28 : ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಇಂದ್ರನಂದನ ವಾನರೇಂದ್ರ ಯಕ್ಷಗಾನ

0

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ
ಧರ್ಮಸ್ಥಳ ಇವರಿಂದ ಡಿ.28 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು ಇಂದ್ರನಂದನ ವಾನರೇಂದ್ರ ಎಂಬ ಪುರಾಣ ಪುಣ್ಯ ಕಥಾಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು.
ಮಧ್ಯಾಹ್ನ ಶ್ರೀ ಚೆನ್ನಕೇಶವ ದೇವಸ್ಥಾನದ ಸನ್ನಿಧಾನದಲ್ಲಿ ಯಕ್ಷಗಾನ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ,ಮಹಾಪೂಜೆ ನಡೆಯಲಿದೆ.
ಸಂಜೆ ಗಂಟೆ 7.00 ಕ್ಕೆ ಚೌಕಿ ಪೂಜೆ ನಡೆದ ಬಳಿಕ ರಾತ್ರಿ 12 ಗಂಟೆಯ ತನಕ ಯಕ್ಷಗಾನ ನಡೆಯಲಿದೆ.