ಅರಂತೋಡು : ವಾರ್ಷಿಕ ಮಜಿಲಿಸ್ ನ್ನೂರ್ ಸಮಸ್ತ 100ನೇ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ

0


ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 2025, ಡಿಸೆಂಬರ್ 20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯುವ 7ನೇ ವಾರ್ಷಿಕ ಮಜಿಲಿಸ್ ನ್ನೂರ್, ಸಮಸ್ತ 100 ನೇ ಪ್ರಚಾರ ಸಮ್ಮೀಳನ ಮತ್ತು ಏಕದಿನ ಮತ ಪ್ರಭಾಷಣದ ಪೋಸ್ಟರನ್ನು ಡಿ.12 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆಯವರು ಬಿಡುಗಡೆಗೊಳಿಸಿದರು.

ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ, ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಸಂಶುದ್ಧೀನ್ ಪೆಲ್ತಡ್ಕ, ಎ.ಹನೀಫ್, ಮುಜೀಬ್, ಸೌದಿ ಸಮಿತಿ ಪ್ರತಿನಿಧಿ ಜಾವೇದ್ ಪೆಲ್ತಡ್ಕ, ಇಸಾಕುದ್ಧೀನ್, ದುಬೈ ಸಮಿತಿ ಪ್ರತಿನಿಧಿ ಕೆ.ಎಂ ಅನ್ವಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಎಸ್.ಇ ಜುಬೈರ್ ಆಶಿಕ್ ಕುಕ್ಕುಂಬಳ, ತಾಜುದ್ದೀನ್ ಅರಂತೋಡು, ಹಾಜಿ ಅಝರುದ್ದೀನ್, ಮುಝಮ್ಮಿಲ್ ಕುಕ್ಕುಂಬಳ, ಜವಾದ್ ಪಾರೆಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.