ಪೆರುವಾಜೆ ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ

0

ಇಂದು ರಾತ್ರಿ ಹರಕೆಯ ಕೊರಗಜ್ಜನ‌ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.29 ರಂದು ನಡೆಯಿತು.


ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ದೈವದ ಭಂಡಾರ ತೆಗೆಯಲಾಯಿತು.
ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ರಾತ್ರಿ ಶ್ರೀ ಕೊರಗ ತನಿಯ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಪೊಡಿಯ ಹಾಗೂ ಮನೆಯವರು ಮತ್ತು ಕುಟುಂಬಸ್ಥರು ವೈಪಾಲ ಕೊಲ್ಯ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.
ಡಿ.30 ರಂದು ಐವರ್ನಾಡು ಗ್ರಾಮದ ದೇವರಕಾನ ಮನೆಯ ಕೆ.ಬಿ.ಪ್ರಸಾದ್ ನಿತ್ಯ ಚಿಕನ್ ಸೆಂಟರ್ ಬೆಳ್ಳಾರೆ ಹಾಗೂ ಮನೆಯವರ ಹರಕೆಯ ನೇಮೋತ್ಸವವು ರಾತ್ರಿ ಗಂಟೆ 8.00 ರಿಂದ ನಡೆಯಲಿರುವುದು.