ಭಾರತದ ಅತೀ ದೊಡ್ಡತೆಂಗು ರೈತರ ಸಂಸ್ಥೆಯ ʼಕಲ್ಪಸಮೃದ್ಧಿʼಯೋಜನೆಯಡಿಯಲ್ಲಿ ಠೇವಣಿ ಹೂಡಲು ಸುವರ್ಣ ಅವಕಾಶ

0

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಬೆಳೆ ಬೆಳೆದ ರೈತನಿಗೆ ಗರಿಷ್ಟ ಲಾಭ ತಂದು ಕೊಡಬೇಕು ಎಂಬ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಕರಾವಳಿ ಕರ್ನಾಟಕದಲ್ಲಿ ಅಕ್ಷರಶ:ಸಾಕಾರಗೊಳಿಸುತ್ತಿರುವುದು “ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಸಂಸ್ಥೆ”. ರೈತರಿಂದಲೇ ಸ್ಥಾಪಿತವಾದ ಈ ಸಂಸ್ಥೆ ತೆಂಗಿನಮರ ಹಾಗೂ ಅದರ ಸಂಪೂರ್ಣ ಉತ್ಪನ್ನವನ್ನು ಮೌಲ್ಯವರ್ಧಿಸಿ ,ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನಾಗಿ ತಯಾರಿಸಿ ,ನೇರವಾಗಿ ಗ್ರಾಹಕನಿಗೆ ಒದಗಿಸುತ್ತಿದೆ.

ಕರಾವಳಿ ಭಾಗದ ವಿವಿಧೆಡೆ 11 ಶಾಖೆಗಳನ್ನು ಹೊಂದಿದ್ದು ಜನಮನ್ನಣೆ ಗಳಿಸಿಕೊಂಡ ಸಂಸ್ಥೆಯಾಗಿದೆ.

ಕಲ್ಪ ಸಮೃದ್ದಿ ಯೋಜನೆ
ರೈತ ಸಮೂಹದ ನಂಬುಗೆಯ ಸಂಸ್ಥೆಯಾಗಿ ಬೆಳೆದು ನಿಂತಿರುವ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ತೆಂಗು ಸಂಸ್ಥೆಯು ರೈತರಿಗೆ ಹಾಗೂ ಸಾರ್ವಜನಿಕರಿಗೆ ಆದಾಯ ಕಲ್ಪಿಸುವ ಉದ್ದೇಶದಿಂದ ‘ಕಲ್ಪಸಮೃದ್ದಿ ‘ಎಂಬ ವಿಶೇಷ ಠೇವಣಿ ಯೋಜನೆಯೊಂದನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ 3 ವರ್ಷದ ಠೇವಣಿದಾರರಿಗೆ ಉತ್ತಮ ಆದಾಯವನ್ನು ಗಳಿಸುವ ಅವಕಾಶವಿದೆ. ಠೇವಣಿಗೆ ವಾರ್ಷಿಕ ಶೇ.12ರ ಬಡ್ಡಿದರದಂತೆ, 3 ವರ್ಷದ ಅವಧಿಗೆ
ಶೇ.40.5 ರಷ್ಟು ಆದಾಯವನ್ನು ಮರಳಿಸುತ್ತದೆ. 1 ಲಕ್ಷ ಠೇವಣಿಗೆ 3 ವರ್ಷಕ್ಕೆ 40,492/- ಆದಾಯ ಗಳಿಸಬಹುದಾಗಿದೆ.


ಠೇವಣಿದಾರ 1 ಲಕ್ಷ ಠೇವಣಿ ಇರಿಸಿದಲ್ಲಿ ಪ್ರತಿ ತಿಂಗಳು 948/- ಆದಾಯ ಕಲ್ಪ ಸಮೃದ್ದಿ ಯೋಜನೆಯಡಿ ಪಡೆಯಬಹುದಾಗಿದೆ. ನಿಗದಿತ ಮಾಸಿಕ ಆದಾಯವನ್ನು ಪಡೆಯಲು ಬಯಸುವವರಿಗೆ ಈ ಯೋಜನೆ ವರದಾನವಾಗಿದೆ, ಗರಿಷ್ಠ3 ವರ್ಷದ ಅವಧಿಗೆ ಠೇವಣಿ ಇಡಲು ಅವಕಾಶವಿದ್ದು, ಆಸ್ತಿ ನಿವೇಶನ ಅಥವಾ ಇನ್ನಿತರ ಹೂಡಿಕೆಗಳಿಗಿಂತ ಈ ಯೋಜನೆಯಲ್ಲಿ ಅತ್ಯಧಿಕ ಮತ್ತು ಅನುಕೂಲಕ್ಕೆ ತಕ್ಕಂತೆ ಸುರಕ್ಷಿತವಾಗಿ ,ವ್ಯವಸ್ಥಿತ ರೀತಿಯಲ್ಲಿ ಆದಾಯಗಳಿಸುವ ಜೊತೆಗೆ ,ರೈತರ ಕೃಷಿ ಚಟುವಟಿಕೆಗಳ ಆದಾಯಕ್ಕೆ ಬೆಂಬಲ ನೀಡಿದಂತಾಗುತ್ತದೆ.

ಠೇವಣಿದಾರ ನೀಡುವ ರಾಷ್ಟ್ರೀಕೃತ ಬ್ಯಾಂಕಿನ ಖಾತೆಗೆಆದಾಯವನ್ನು ಸಂಸ್ಥೆಯು ನೇರವಾಗಿ ವರ್ಗಾಯಿಸುತ್ತದೆ.

3 ವರ್ಷದ ಠೇವಣಿಗೆ ಸಂಸ್ಥೆಯು ಕೊಡುವ
ಶೇ 40.5 ಬಡ್ಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ಅತ್ಯಧಿಕ. ಇಷ್ಟು ಬಡ್ಡಿ ನೀಡಲು ಸಂಸ್ಥೆಯೊಂದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಅನುಮಾನ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಆದರೆ ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ತಿಳಿದು ಸೂಕ್ಷ್ಮವಾಗಿ ಗಮನಿಸಿದಾಗ ಯೋಜನೆ ಪ್ರಾಯೋಗಿಕವಾಗಿ ಸಾಧ್ಯ ಎಂಬುವುದು ಅರಿವಾಗಲು ಸಾಧ್ಯವಿದೆ.

ಸಂಸ್ಥೆಯು ತೆಂಗಿನಕಾಯಿ, ಸಿಪ್ಪೆ, ಚಿಪ್ಪು, ಗರಿ, ಸಿರಿ, ತಿರುಳು, ಮರ ಹೀಗೆ ಪ್ರತಿಯೊಂದನ್ನೂ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದ್ದು, ಸಂಸ್ಥೆಯು ಮಂಗಳೂರು, ಸುಳ್ಯದ ದೊಡ್ಡತೋಟ ಹೀಗೆ ಹಲವೆಡೆ ಫ್ಯಾಕ್ಟರಿ ಹೊಂದಿರುತ್ತದೆ.
ಬಹುರಾಷ್ಟ್ರೀಯ ಕಂಪೆನಿ ಗಳಿಂದಲೂ ಉತ್ಪನ್ನಗಳ ಬೇಡಿಕೆ ಇದ್ದು ಉತ್ಪನ್ನಗಳ ಉತ್ಪಾದಕತೆ ಹಾಗೂ ವ್ಯವಸ್ಥಿತ ಪೂರೈಕೆಗೆ ಕಾರ್ಯ ಪ್ರಕ್ರಿಯೆಗಳು ಭರದಿಂದ ನಡೆಯುತ್ತಿದೆ. ಈ ವ್ಯವಸ್ಥೆಯ ಮೂಲಕ ಕಂಪೆನಿಯು ಹೆಚ್ಚುವರಿ ಆದಾಯ ಗಳಿಸುತ್ತಿದ್ದು ರೈತರಿಂದ ಬೆಳೆಗಳನ್ನು ಖರೀದಿಸಲು , ದಾಸ್ತಾನು ಮಾಡಲು ಹಾಗೂ ಮೌಲ್ಯವರ್ಧನೆಗೆ ಬೇಕಾಗುವ ಬಂಡವಾಳಕ್ಕೆ ಠೇವಣಿ ಹಣವನ್ನು ಬಳಸಲಾಗುತ್ತದೆ. ಸಂಸ್ಥೆಯ ಉತ್ಪನ್ನಗಳ ಮಾರಾಟದಿಂದ ಬರುವ ಅಧಿಕ ಲಾಭವನ್ನು ಬಡ್ಡಿ ರೂಪದಲ್ಲಿ ಗ್ರಾಹಕರಿಗೆ ನೀಡುತ್ತದೆ . ಇದರಿಂದಾಗಿ
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಠೇವಣಿದಾರರಿಗೆ ಅತೀ ಹೆಚ್ಚು ಬಡ್ಡಿ ನೀಡಲು ಸಾಧ್ಯವಾಗಿದೆ.
ಸಂಸ್ಥೆ ತಯಾರಿಸುವ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು,ತೆಂಗಿನ ಎಣ್ಣೆ, ಕೋಕೊ ಫೈಬರ್, ಕೋಕೋಪಿಟ್ ಬ್ರಿಕ್ಸ್, ಗೆರಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಗೆರಟೆಯಿಂದ ಐಸ್ ಕ್ರೀಂ ಕಪ್,ವರ್ಜಿನ್ ತೆಂಗಿನ ಎಣ್ಣೆ, ಕ್ಯಾಪ್ಸಲ್, ತೆಂಗಿನ ಹಾಲು, ತೆಂಗಿನ ಉಪ್ಪಿನಕಾಯಿ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಕರಕುಶಲ ವಸ್ತು ಹಾಗೂ ತೆಂಗಿನ ಮರದ ಪೀಠೋಪಕರಣಗಳು, ಇಪಿಎನ್ ಬಯೋ ರಸಗೊಬ್ಬರ, ಸಾವಯವ ಗೊಬ್ಬರ, ವರ್ಮಿ ಕಾಂಪೋಸ್ಟ್ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
14 ಸಾವಿರ ಕ್ಕಿಂತಲೂ ಅಧಿಕ ನೋಂದಾಯಿತ ಸದಸ್ಯರ ಬಲ ಸಂಸ್ಥೆಯು ಹೊಂದಿದೆ.
ಆಗಾಧವಾಗಿ ಬೆಳೆದು ನಿಂತಿರುವ ಕಂಪೆನಿಯು 12 ಲಕ್ಷಕ್ಕಿಂತ ಅಧಿಕ ತೆಂಗಿನ ಮರಗಳು,
54 ಸಾವಿರ ಎಕರೆ ಪ್ರದೇಶದಷ್ಟು ವಿಸ್ತೀರ್ಣ ಭೂ ಪ್ರದೇಶವನ್ನು ತನ್ನ ಕಾರ್ಯಚಟುವಟಿಕೆಯ ಭಾಗವಾಗಿಸಿದೆ.
ಈ ಮೂಲಕ ರೈತರ ಹಾಗೂ ಬಳಕೆದಾರರ
ಹಿತ ಕಾಪಾಡಲು ಕಾರ್ಯಮಗ್ನವಾಗಿದೆ.
ಪಂಚಕಲ್ಪ ಕಾರ್ಯಯೋಜನೆ
ಸಂಸ್ಥೆಯು ಪಂಚಕಲ್ಪ ಎಂಬ ವಿಶಿಷ್ಟ ಕಾರ್ಯಯೋಜನೆ ಹೊಂದಿದ್ದು,ಕಲ್ಪವೃಕ್ಷ, ಕಲ್ಪರಸ, ಕಲ್ಪ ಸಮೃದ್ದಿ, ಕಲ್ಪ ಸಂಪರ್ಕ ಮತ್ತು ಕಲ್ಪ ಸೇವಾ ಈ ಯೋಜನೆಗಳ ಮೂಲಕ ತೆಂಗು ಮೌಲ್ಯವರ್ಧನೆ, ಸ್ವಾ ಉದ್ಯೋಗ,ಮಹಿಳಾ ಸಬಲೀಕರಣ, ಕೃಷಿ ತಂತ್ರಜ್ಞಾನಗಳ ಮೂಲಕ ರೈತರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ಸಮರ್ಥ ಆಡಳಿತ ಮಂಡಳಿ
ಕೃಷಿಕರೇ ಸೇರಿ ಈ ಸಂಸ್ಥೆಯನ್ನು ಮುಂದಡಿಯಿಟ್ಟರೂ ಸುಮಾರು 16 ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಒಳಗೊಂಡಂತಹ ಸಮರ್ಥ ಆಡಳಿತ ಮಂಡಳಿ ಹಾಗೂ ಬಲಿಷ್ಠ ಸಲಹಾ ಸಮಿತಿಯ ಮೂಲಕ ಈ ಸಂಸ್ಥೆಯು ಮುನ್ನಡೆಯುತ್ತಿದೆ.
ಹೆಸರಾಂತ ಆರ್ಥಿಕ ತಜ್ಞರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಯುವ ಉದ್ಯಮಿಗಳು, ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕರು ಈ ಸಮಿತಿಯ ಸದಸ್ಯರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಕಲ್ಪಸಮೃದ್ಧಿಯೋಜನೆಯ ಫಲಾನುಭವಿಗಳಾಗಲು 200 ಜನರಿಗೆ ಮಾತ್ರ ಅವಕಾಶ ಕಲ್ಪ ಸಮೃದ್ಧಿ ಯೋಜನೆಯ ಸ್ಥಿರ ಠೇವಣಿಗಳಿಗೆ ಜ. 30 ಕೊನೆಯ ದಿನವಾಗಿದೆ. ಈಗಾಗಲೇ 5 ಲಕ್ಷ ವರೆಗಿನ ಸ್ಲಾಟ್ಗಳುಭರ್ತಿಯಾಗಿದ್ದು ಅದಕ್ಕಿಂತ ಮೇಲ್ಪಟ್ಟ ಮೊತ್ತದ ಕೇವಲ 200 ಠೇವಣಿದಾರರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ ತಿಳಿಸಿರುತ್ತಾರೆ.

ಸಂಸ್ಥೆಯ ಹತ್ತಿರದ ಶಾಖೆಯನ್ನು ಸಂಪರ್ಕಿಸಿ ಕಲ್ಪಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಪೂರಕ ದಾಖಲೆಯನ್ನು ಒದಗಿಸಿ ಅರ್ಜಿಯನ್ನು ಸಲ್ಲಿಸುವುದು.
ಯಾವುದೇ ಕಚೇರಿಯ ಅಲೆದಾಟವಿಲ್ಲದೆ ಆನ್ಲೈನ್ ಮುಖಾಂತರವೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆಸಕ್ತರು ಸಂಸ್ಥೆಯ ವೆಬ್ಸೈಟ್www.coconutfarmers.in ಅಥವಾ ಟೋಲ್ ಫ್ರೀ ಸಂಖ್ಯೆ – 18002030129 ಕರೆಮಾಡಿಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ಠೇವಣಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಗೆ ದೂರವಾಣಿ ಸಂಖ್ಯೆ 8105487763 ಸಂಪರ್ಕಿಸಬಹುದಾಗಿದೆ‌ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.