ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಸುರಕ್ಷಾ ವಿಮಾ ಚೆಕ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ, ಪಂಜ ವಲಯದ ಬಳ್ಪ ಕಾರ್ಯಕ್ಷೇತ್ರದ ಸ್ಫೂರ್ತಿ ಸ್ವ ಸಹಾಯ ಸಂಘದ ಸದಸ್ಯರಾದ ಶ್ರೀಮತಿ ರಾಜೀವಿಯವರಿಗೆ ಸಂಪೂರ್ಣ ಸುರಕ್ಷಾ ವಿಮಾ ಮೊತ್ತದ ಚೆಕ್ ನ್ನು ಬಳ್ಪ ಗ್ರಾ. ಪಂ. ಮಾಜಿ ಸದಸ್ಯ ವಿನೋದ್ ಬೋಲ್ಮಳೆಯವರು ಜ. 5ರಂದು ವಿತರಿಸಿದರು. ಈ ಸಂದರ್ಭದಲ್ಲಿ ಪಂಜ ವಲಯದ ಮೇಲ್ವಿಚಾರಕರಾದ ಶ್ರೀಮತಿ ಕಲಾವತಿ, ಬಳ್ಪ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ಜಲಜಾಕ್ಷಿ, ಬಳ್ಪ ಒಕ್ಕೂಟದ ನಿಕಟ ಪೂರ್ವ ಕಾರ್ಯದರ್ಶಿ ಶ್ರೀಮತಿ ಲಲಿತ, ಬಳ್ಪ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಭವ್ಯ, ವಿ.ಎಲ್.ಇ ಶ್ರೀಮತಿ ಲಿನ್ಯಶ್ರೀ ಉಪಸ್ಥಿತರಿದ್ದರು.