ಮಾಜಿ ಸಿ.ಎಂ. ದಿ.ಎಸ್.ಎಂ.ಕೃಷ್ಣರ ಪ್ರತಿಮೆಯನ್ನು ವಿಕಾಸಸೌಧದ ಎದುರು ಸ್ಥಾಪಿಪಿಸುವಂತೆ

0

ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಮನವಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿಶೇಷವಾಗಿ ಬಿಸಿಯೂಟದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ದಿ| ಎಸ್.ಎಂ.ಕೃಷ್ಣರವರು ಬೆಂಗಳೂರಿನಲ್ಲಿ ವಿಕಾಸಸೌಧವನ್ನು ನಿರ್ಮಿಸಲು ಕಾರಣಕರ್ತರಾದವರು. ಆದ್ದರಿಂದ ಅವರ ಪ್ರತಿಮೆಯನ್ನು ವಿಕಾಸಸೌಧದ ಎದುರು ಸ್ಥಾಪಿಸಬೇಕೆಂದು ಸುಳ್ಯದ ಗೌಡರ ಯುವ ಸೇವಾ ಸಂಘದ ಪ್ರಮುಖರು ಸುಳ್ಯ ತಹಶೀಲ್ದಾರ್ ಮೂಲಕ ಸರಕಾರಕ್ಕೆ‌ಮನವಿ ಸಲ್ಲಿಸಿದ್ದಾರೆ.

” ಎಸ್.ಎಂ. ಕೃಷ್ಣ ರವರು ಬೆಂಗಳೂರನ್ನು ಐಟಿಪಾರ್ಕ್ ಮಾಡುವಲ್ಲಿ ಯಶಸ್ವಿಯಾದವರು. ಇಂದು ನಾಡಿನ ಹಳ್ಳಿಗಳಿಂದ ವಿದ್ಯಾಭ್ಯಾಸ ಪಡೆದು ಐಟಿ,ಬಿಟಿಯಲ್ಲಿ ಉದ್ಯೋಗ ಹೊಂದಿ ಸ್ಥಿತಿವಂತರಾಗಿ ಹಳ್ಳಿಯಲ್ಲಿರುವ ತಮ್ಮ ಹಿರಿಯರನ್ನು, ಕೃಷಿಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇಂತಹ ಕೆಲಸಕಾರ್ಯಗಳಿಗೆ ಮುನ್ನುಡಿ ಬರೆದ ಮತ್ತು ವಿಕಾಸಸೌಧ ನಿರ್ಮಿಸಲು ಕಾರಣ ಕರ್ತರಾದ ಮಾನ್ಯ ದಿ| ಎಸ್.ಎಂ.ಕೃಷ್ಣರವರ ಪ್ರತಿಮೆಯನ್ನು ವಿಕಾಸಸೌಧದ ಮುಂಭಾಗ ಸ್ಥಾಪಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ನಿಕಟಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಗೌಡ ಸಂಘದ ನಿರ್ದೇಶಕ ಸುಪ್ರೀತ್ ಮೋಂಟಡ್ಕ, ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ., ಕಾರ್ಯದರ್ಶಿ ಸನತ್ ಪೆಲ್ತಡ್ಕ, ಎಂ.ಜೆ.ಶಶಿಧರ್, ಶಿವರಾಮ ಕೇರ್ಪಳ, ಶಿವಪ್ರಸಾದ್ ಬಾಳೆಕೋಡಿ , ವೆಂಕಟ್ರಮಣ ಮಡ್ತಿಲ ಇದ್ದರು.