ಪೈಂಬೆಚ್ಚಾಲು :ದ್ವಿಚಕ್ರ ವಾಹನದಿಂದ ಬಿದ್ದು ಗಂಭೀರ ಗಾಯವಾಗಿ ಚಿಕಿತ್ಸೆ ಪಡೆಯುತಿದ್ದ ಮಹಿಳೆ ಮೃತ್ಯು

0

ಆಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಬಸ್ ನಿಲ್ದಾಣ ಬಳಿ ಜ 12 ರಂದು ದ್ವಿಚಕ್ರ ವಾಹನದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕೆತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ನಿನ್ನೆ ತಡ ರಾತ್ರಿ ನಿಧನರಾಗಿದ್ದಾರೆ. ಮೃತರು ಐವತ್ತೊಕ್ಲು ಗ್ರಾಮದ ಪಳ್ಳಿ ಮನೆ ನಿವಾಸಿ ಮಾರಿಯಮ್ಮ 52 ವರ್ಷ ಎಂಬುವವರಾಗಿದ್ದಾರೆ.

ಇವರು ಪೈಂಬೆಚ್ಚಲು ಕುಟುಂಬದ ಸದಸ್ಯರೋರ್ವರ ಮದುವೆ ಕಾರ್ಯಕ್ರಮಕ್ಕೆ ಮುಹಮ್ಮದ್ ರಿಯಾಜ್ ಎಂಬುವವರ ಜೊತೆ ಸಹಸವಾರರಾಗಿ ಹೋಗುತ್ತಿದ್ದ ವೇಳೆ ಆಲೆಟ್ಟಿ ಅಜ್ಜಾವರ ರಸ್ತೆಯಲ್ಲಿ ಹೊರಟು ಹೋಗುತ್ತಿರುವಾಗ ಸಮಯ 1.15 ಗಂಟೆಗೆ ಪೈಂಬೆಚ್ಚಾಲು ಬಸ್ ನಿಲ್ದಾಣ ಬಳಿ ಹಂಪ್ ನಲ್ಲಿ ಮುಹಮ್ಮದ್ ರಿಯಾಜ್ ಸ್ಕೂಟರನ್ನು ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಮರಿಯಮ್ಮ ಪಿ ರವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯವಾಗಿ ಮೂಗಿನಿಂದ ರಕ್ತ ಬಂದಿದೆ ಎನ್ನಲಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಕಾರಿನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ತಡ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.