ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವ ವು ಜ.26ರಿಂದ ಆರಂಭಗೊಂಡು ಜ.28ರವರೆಗೆ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಜ.14ರಂದು ದೇವಸ್ಥಾನದಲ್ಲಿ ನಡೆಯಿತು. ಬೆಳಗ್ಗೆ ದೇವರ ಮುಂದೆ ಆಮಂತ್ರಣ ಇಟ್ಟು ಅರ್ಚಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ದೇವಸ್ಥಾನದ ಮುಂಭಾಗ ಆಮಂತ್ರಣ ಬಿಡುಗಡೆ ನಡೆಯಿತು. ದೇವಸ್ಥಾನದ ಆಡಳಿತಾಧಿಕಾರಿ, ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್. ಆಮಂತ್ರಣ ಬಿಡುಗಡೆಗೊಳಿಸಿ, ಜಾತ್ರೋತ್ಸವ ಯಶಸ್ಸಿಗಾಗಿ ಪ್ರಾರ್ಥಿಸಿದರು.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಪ್ರಧಾನ ಅರ್ಚಕ ನೀಲಕಂಠ ಭಟ್, ಗೌರವಾಧ್ಯಕ್ಸ ಕೃಷ್ಣ ಕಾಮತ್ ಸೇವಾಸಮಿತಿ ಸಂಚಾಲಕ ನವೀನ್ ಕುದ್ಪಾಜೆ, ಚಂದ್ರಶೇಖರ ಅಡ್ಪಂಗಾಯ, ಕೃಷ್ಣ ಬೆಟ್ಟ, ಎ.ಟಿ ಕುಸುಮಾಧರ, ಪ್ರಶಾಂತ್ ಕಾಯರ್ತೋಡಿ, ಪದ್ಮನಾಭ ಅಳಿಕೆಮಜಲು, ದೇವರಾಜ್ ಕುಡುಪಾಜೆ, ವಾಸುದೇವ ಕಾಯರ್ತ್ತೋಡಿ, ಭವಾನಿ ಪ್ರಸಾದ್ ನಡುಮುಟ್ಲು, ಪರಮೇಶ್ವರ ಬೋಳಿಯಮಾಜಲು, ಡಿ.ಎನ್.ವೆಂಕಟ್ರಮಣ, ಮ್ಯಾನೇಜರ್ ದೇವಿಪ್ರಸಾದ್, ವಿವಿಧ ಸಮಿತಿ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.