ಪೈಗಂಬರ್ ರವರ ಮೇಲಿನ ಪ್ರೀತಿಯನ್ನು ಅಘಾದವಾದ ಮನಸ್ಸಿನಿಂದ ಮಾಡಬೇಕಾಗಿದೆ:ಕುಂಬೋಳ್ ಮುಖ್ತಾರ್ ತಂಙಳ್

0

ಮೊಗರ್ಪಣೆ ಮಖಾಂ ಉರೂಸ್ ಧಾರ್ಮಿಕ ಸಭಾ ಕಾರ್ಯಕ್ರಮದ ಎರಡನೇ ದಿನವಾದ ಜ 13 ರಂದು ಸಾಮೂಹಿಕ ದುವಾ ಪ್ರಾರ್ಥನೆಗೆ ಖ್ಯಾತ ಧಾರ್ಮಿಕ ಪಂಡಿತ ಕುಂಬೋಳ್ ಸಯ್ಯಿದ್ ಕುಟುಂಬದ ಅಸ್ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ರವರು ಭಾಗವಹಿಸಿ ಪ್ರಾರ್ಥನೆಯನ್ನು ನೆರವೇರಿಸಿದರು.

ಈ ಸಂಧರ್ಭ ಹಿತವಚನ ನೀಡಿದ ಅವರು ‘ನಾವುಗಳು ಸಾಮಾನ್ಯ ಮನುಷ್ಯರುಗಳು ಮಾತ್ರ. ನಮ್ಮ ಜೀವನ ಮತ್ತು ಮರಣ ಪಾವನವಾಗ ಬೇಕಾದರೆ ಅಲ್ಲಾಹನ ಹಾಗೂ ಪೈಗಂಬರ್ ರವರ ಮೇಲೆ ನಮ್ಮಲ್ಲಿ ಅಘಾದವಾದ ಪ್ರೀತಿಯನ್ನು ಬೆಳಿಸಿದಿದ್ದಲ್ಲಿ ಮಾತ್ರ ಸಾಧ್ಯ ಎಂದರು.

ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ್ದ ಹಿರಿಯ ವಾಗ್ಮಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲಾ ರವರು ‘ಇಸ್ಲಾಂನ ಚರಿತ್ರೆಯ ಮಧುರ ಗಾಯನ ಬೆರೆತ ಧಾರ್ಮಿಕ ಪ್ರಭಾಷಣ ಮೂಲಕ ಎಲ್ಲರನ್ನು ಆಕರ್ಷಿಸುವ ರೀತಿಯ ಹಿತ ವಚನವನ್ನು ನೀಡಿದರು.ಆದ್ಯ ಕಾಲದ ಮಹಾನ್ ವಲಿಯವರು ಅಲ್ಲಾಹನ ಆಜ್ಞೆಗಳನ್ನು ಅನುಸರಿಸಿ ಜೀವಿಸಿದವರು. ಇಂದು ಅವರು ಜೀವಂತ ವಿಲ್ಲದಿದ್ದರು ಅವರ ರಕ್ಷಣೆ ಜೀವಿಸುವ ನಮ್ಮ ಮೇಲೆ ಸದಾ ಇರುತ್ತೆ. ಆದ್ದರಿಂದ ಅವರ ಮೇಲಿನ ನಮ್ಮ ವಿಶ್ವಾಸ ನಮ್ಮನ್ನು ಕೆಡುಕಿನಿಂದ ರಕ್ಷಿಸುತ್ತೆ ಎಂದು ಹೇಳಿದರು.

ವೇದಿಕೆಯಲ್ಲಿ ಉರೂಸ್ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಜಿ.ಇಬ್ರಾಹಿಂ ಹಾಜಿ ಸೀಫುಡ್,ಕನ್ವಿನರ್ ಹಾಜಿ ಅಬ್ದುಲ್ ರಜ್ಜಾಕ್ ಶೀತಲ್, ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ಜಯನಗರ, ಉರೂಸ್ ಸ್ವಾಗತ ಸಮಿತಿ ಕನ್‌ವೀನರ್ ಅಬ್ದುಲ್ ರಝಕ್ ಹಾಜಿ ಶೀತಲ್, ಹೆಚ್‌ಐಜೆ ಕಮಿಟಿ ಉಪಾಧ್ಯಕ್ಷ ಸಿ. ಎಂ‌.ಉಸ್ಮಾನ್, ಪೈಚಾರು ಬಿ ಜೆ ಎಂ ಖತೀಬರಾದ ಶಮೀರ್ ನಈಮಿ, ಹೆಚ್‌ಐಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್.ಯು.ಇಬ್ರಾಹಿಂ, ನಿರ್ದೇಶಕರಾದ ಅಬ್ದುಲ್ ಸಮದ್ ಹಾಜಿ, ಮಾಜಿ ಅಧ್ಯಕ್ಷರುಗಳಾದ ಹಸ್ಸನ್ ಹಾಜಿ, ಹಾಜಿ ಪಳ್ಳಿ ಕುಂಞಿ, ಸದಸ್ಯರುಗಳಾದ ಉಮ್ಮರ್ ಹಾಜಿ ಎಚ್.ಎ, ಅಬ್ದುಲ್ ರಝಾಕ್ ಜಿ.ಕೆ, ಅಬ್ದುಲ್ ಖಾದರ್, ಮಂಗಳೂರು ಪಿ ಎ ಕಾಲೇಜು ಪ್ರೊಪೆಸ್ಸರ್ ಶಾಫಿ ಇಸ್ಮಾಹಿಲ್,ಎನ್ ಐ ಎಂ ಮದ್ರಸ ಅಧ್ಯಾಪಕರುಗಳಾದ ಮೂಸಾ ಮುಸ್ಲಿಯಾರ್, ಅಬ್ದುಲ್ ರಶೀದ್ ಝೖನಿ ಯೂಸುಫ್ ನಿಝಮಿ , ಹಂಝ ಸಖಾಫಿ,ಅಬೂಬಕ್ಕರ್ ಸಿದ್ದಿಕ್ ಸಅದಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯನಗರ ಮದ್ರಸ ಸದರ್ ಮುಅಲ್ಲಿಂ ಶಫೀಕ್ ನಈಮಿ ಸ್ವಾಗತಿಸಿ, ಸದರ್ ಮುಅಲ್ಲಿಮ್ ಮುಅಲ್ಲೀಂ ಅಬ್ದುಲ್ ಕರೀಂ ಸಖಾಫಿ ವಂದಿಸಿದರು.