ಮರಾಟಿ ಯುವ ವೇದಿಕೆ ವತಿಯಿಂದ ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

0

ಓಂ ಫ್ರೆಂಡ್ಸ್ ದೊಡ್ಡೇರಿ ವಿನ್ನರ್ಸ್-
ಬ್ಲಾಕ್ ಟೋಪ್ ಕೂಟೇಲು ರನ್ನರ್ಸ್

ಮರಾಟಿ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಮತ್ತು ಮರಾಟಿ ಮಹಿಳಾ ವೇದಿಕೆ ಸುಳ್ಯ ತಾಲೂಕು ಇವರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆಯ ವತಿಯಿಂದ ಸುಳ್ಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ಎ.13 ಮತ್ತು 14 ರಂದು ನಡೆದ ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಓಂ ಫ್ರೆಂಡ್ಸ್ ದೊಡ್ಡೇರಿ ವಿನ್ನರ್ಸ್ ಮತ್ತು ಬ್ಲಾಕ್ ಟೋಪ್ ಕೂಟೇಲು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು.


ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಮರಾಟಿ ಸಮಾಜದ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯಾಟದಲ್ಲಿ ದುಗ್ಗಲಾಯ ದುಗ್ಗಲಡ್ಕ ತಂಡ ಮತ್ತು ಬುಲ್ಡೋಜರ್ ಬಾಯ್ಸ್ ತಂಡಗಳನ್ನು ಸೋಲಿಸಿ ಓಂ ಫ್ರೆಂಡ್ಸ್ ದೊಡ್ಡೇರಿ ಮತ್ತು ಬ್ಲಾಕ್ ಟೋಪ್ ಕೂಟೇಲು ಫೈನಲ್ ಪ್ರವೇಶಿಸಿದವು.


ಪೈನಲ್ ಪಂದ್ಯದ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿ ಮತ್ತು ಬೆಸ್ಟ್‌ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ದೊಡ್ಡೇರಿ ತಂಡದ ಅಖಿಲೇಶ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ದೊಡ್ಡೇರಿ ತಂಡದ ಕೇಶವ, ಬೆಸ್ಟ್ ಬೌಲರ್ ಮತ್ತು ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಕೂಟೇಲು ತಂಡದ ದಿಲೀಪ್ ಅಡ್ಕಾರ್ ಪಡೆದುಕೊಂಡರು.


ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ವಹಿಸಿದ್ದರು. ಅತಿಥಿಗಳಾಗಿ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ನಿವೃತ್ತ ದೈ.ಶಿ.ಶಿಕ್ಷಕ ಎಂ.ಎಸ್.ನಟರಾಜ್, ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಲೋಚನಾ, ಕೋಶಾಧಿಕಾರಿ ಐತಪ್ಪ ನಾಯ್ಕ್ ಎನ್. ಕಾರ್ಯಕಾರಿ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ನಿತ್ಯಾನಂದ ಕುಡೆಂಬಿ,ಯುವ ವೇದಿಕೆಯ ಅಧ್ಯಕ್ಷ ಮೋಹನ್ ಪೆರಾಜೆ ಭಾಗವಹಿಸಿದ್ದರು.


ಯುವ ವೇದಿಕೆಯ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು, ಕಾರ್ಯದರ್ಶಿ ಮಿಥುನ್ ನಾಯ್ಕ್ ಶಾಂತಿನಗರ, ಪದಾಧಿಕಾರಿಗಳು, ತಂಡದ ಮಾಲಕರು, ನಿರ್ಣಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.