ದೀನಿ ಪಡಿತರಾದ ಪೇರೋಡ್ ಮುಹಮ್ಮದ್ ಅಝ್ಹರಿ ಹಾಗೂ ಮದನಿಯಂ ಲತೀಫ್ ಸಖಾಫಿ ಕಾಂತಪುರಂ ರವರಿಂದ ಪ್ರಚಾರ ಪತ್ರ ಬಿಡುಗಡೆ
ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದರಸ ವತಿಯಿಂದ ಮಾಸಂ ಪ್ರತಿ ನಡೆಸಿಕ್ಕೊಂಡು ಬರುತ್ತಿರುವ ಅಜ್ಮೀರ್ ಮೌಲೂದ್ ಕಾರ್ಯಕ್ರಮದ 8 ನೇ ವಾರ್ಷಿಕ ಸಮಾರಂಭ ಡಿ. 30 ಹಾಗೂ 31 ರಂದು ನಡೆಯಲಿದೆ.
ಡಿ 30 ರಂದು ಪೇರೋಡ್ ಮುಹಮ್ಮದ್ ಅಝ್ಹರಿ ಉಸ್ತಾದ್ ರವರಿಂದ ಧಾರ್ಮಿಕ ಪ್ರಭಾಷಣ ಹಾಗೂ 31 ರಂದು ಅಜ್ಮಿರ್ ಮೌಲೂದ್ ಮಜ್ಲಿಸ್ ಮತ್ತು ಖ್ಯಾತ ಕತಾಪ್ರಸಂಗ ಆಲಾಪಕ ಝುಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಸಂಘಡಿಗರಿಂದ ಧಾರ್ಮಿಕ ಕತಾ ಪ್ರಸಂಗ ಹಾಗೂ ದುವಾ ಮಜ್ಲಿಸ್ ನಡೆಯಲಿದೆ
.
ಈ ಕಾರ್ಯಕ್ರಮದ ಪ್ರಚಾರ ಪತ್ರವನ್ನು ಬಿಡುಗಡೆಗೊಳಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಖ್ಯಾತ ಪ್ರಭಾಷಣಕಾರ ಧಾರ್ಮಿಕ ಪಂಡಿತ ಕೇರಳದ ಕುಟ್ಟಿಯಾಡಿ ಸಿರಾಜುಲ್ ಹುದಾ ಸಂಸ್ಥೆಯ ಸದಸ್ಯರಾದ ಪೇರೋಡ್ ಮೊಹಮ್ಮದ್ ಅಝ್ಹರಿ ಉಸ್ತಾದ್, ಹಾಗೂ ಖ್ಯಾತ ಮದನಿಯಂ ಮಜ್ಲಿಸ್ ಇದರ ಸ್ಥಾಪಕ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ರವರು ಪ್ರಚಾರ ಪತ್ರ ಬಿಡುಗಡೆ ಗೊಳಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಾರೈಸಿದರು.
ಮೊಗರ್ಪಣೆ ಜುಮ್ಮಾ ಮಸ್ಜಿದ್ ವಠಾರದಲ್ಲಿ ಮದನಿಯಂ ಉಸ್ತಾದ್ ರವರು ಬಿಡುಗಡೆ ಗೊಳಿಸಿ ದರ್ಗಾ ಝಿಯಾತ್ ನಡೆಸಿ ಸಾಮೂಹಿಕ ದುವಾ ನೆರವೇರಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಮುದರ್ರಿಸ್ ಹಾಫಿಲ್ ಶೌಖತ್ ಅಲಿ ಸಖಾಫಿ, ಸಯ್ಯದ್ ಜೈನುಲ್ ಆಬಿಧೀನ್ ತಂಗಳ್ ಜಯನಗರ,ಮೊಗರ್ಪಣೆ ಎಚ್ ಐ ಜೆ ಕಮಿಟಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀ ಫುಡ್, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ, ದ. ಕ ಜಿಲ್ಲಾ ವಖ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ ಹಾಗೂ ಸಮಿತಿ ಸದಸ್ಯರುಗಳು,ಜೆ ಯು ಎಂ ಎಂ ಜಯನಗರ ಇದರ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ಸಖಾಫಿ ಅಧ್ಯಕ್ಷ ಹಾಜಿ ಅಬ್ದುಲ್ಲಾ, ಉಪಾಧ್ಯಕ್ಷ ಜಾಹಿರ್, ಪ್ರ.ಕಾರ್ಯದರ್ಶಿ ಹಸೈನಾರ್ ಜಯನಗರ,ಹಾಗೂ ಸದಸ್ಯರುಗಳು,
ಹಾಗೂ ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.