ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವತಿಯಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ನೆಲ್ಲಿತೀರ್ಥ, ಗುರುಪುರ, ಮೂಲ್ಕಿ ತಾಲೂಕಿನ ಕಮ್ಮಾಜೆ, ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಮಚ್ಚಿನ, ಹೊಸಂಗಡಿ ಬಂಟ್ವಾಳ ತಾಲೂಕಿನ ವಗ್ಗ, ಪುಂಜಾಲಕಟ್ಟೆ, ಪುತ್ತೂರು ತಾಲೂಕಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಪಂಜ ಹಾಗೂ ಮೂಡಬಿದ್ರೆ ತಾಲೂಕಿನ ಕಲ್ಲಬೆಟ್ಟು, ಮೊರಾರ್ಜಿ ದೇಸಾಯಿ/ ಡಾ. ಬಿ. ಆರ್. ಅಂಬೇಡ್ಕರ್/ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಸೇರ್ಪಡೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರವೇಶ ಪರೀಕ್ಷೆ ನಡೆಸಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/01/2025
ಪರೀಕ್ಷಾ ದಿನಾಂಕ: 15-02-2025 ಶನಿವಾರ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
1.ವಿದ್ಯಾರ್ಥಿಯ SATS ಸಂಖ್ಯೆ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅರ್ಜಿ ಸಲ್ಲಿಸುವ ದಿನಾಂಕದವರೆಗೂ ಚಾಲ್ತಿಯಲ್ಲಿರಬೇಕು)
ವಾರ್ಷಿಕ ಆದಾಯ ಮಿತಿ
SC/ST/C-1: ₹2,50,000.
2A,2B,3A,3B: ₹1,00,000 )
3.ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ-1
4.ಇತರೆ ಮೀಸಲಾತಿ ಕೋರುವ ಪ್ರಮಾಣ ಪತ್ರಗಳು
ಇತರೆ ಮೀಸಲಾತಿ ಪ್ರಮಾಣ ಪತ್ರಗಳೆಂದರೆ:
A) ವಿಶೇಷ ಚೇತನ ಮಗು(PH)
B) ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ ಅತಿ ಸೂಕ್ಷ್ಮ ಮಗು
C) ಮಾಜಿ ಸೈನಿಕರ ಮಗು
D) ಆಶ್ರಮ/ ವಸತಿ ಶಾಲೆ ಮಗು
E) ಪೌರ ಕಾರ್ಮಿಕರ/ಸಫಾಯಿ ಕರ್ಮಚಾರಿ ಮಗು
F)ಬಾಲ ಕಾರ್ಮಿಕ, ವಿಧವೆ ಮಗು ದೇವದಾಸಿ ಮಗು, ವಿಧುರನ ಮಗು, ಯೋಜನಾ ನಿರಾಶ್ರಿತರ ಮಗು, ಅನಾಥ ಮಗು, ಹೆಚ್.ಐ.ವಿ ಪೀಡಿತರ ಮಗು, ಆತ್ಮಹತ್ಯೆ ರೈತರ ಮಗು.
G)ಸ್ಥಳೀಯ ಅಭ್ಯರ್ಥಿ( ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲ್ಲೂಕಿನ ಅಭ್ಯರ್ಥಿ)
ಮೇಲ್ಕಂಡ ವಿಶೇಷ ವರ್ಗಕ್ಕೆ ಸೇರಿದಲ್ಲಿ ಸಂಬಂಧಿತ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸುವುದು.
ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯಲ್ಲಿಯೇ ಆನ್ ಲೈನ್ ಮೂಲಕ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ (ಜಿಲ್ಲೆಯ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳುವುದು)
ಅಭ್ಯರ್ಥಿಯು ತನ್ನ ಸ್ವಂತ ಜಿಲ್ಲೆಯ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ .
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಗಳನ್ನು ಸಂಪರ್ಕಿಸುವುದು.