ಶ್ರೀಮತಿ ರಶ್ಮಿಶ್ರೀ ಕೆ ಎನ್ ಇವರು ಮಂಡಿಸಿದ ” ಇನ್ವೆಸ್ಟಿಗೇಶನ್ ಓನ್ ದ ರೋಲ್ ಆಫ್ ಗ್ರೀನ್ ಸಿಂಥಸೈಸಡ್ ಐಯರ್ನ್ ನ್ಯಾನೋ ಪಾರ್ಟಿಕಲ್ಸ್ ಇನ್ ದ ಪೈಂಟಾನ್ಸ್ ಆಕ್ಸಿಡೇಶನ್ ಆಫ್ ಟ್ರೈಕ್ಲೋಸಸ್ ಇನ್ ವೇಸ್ಟ್ ವಾಟರ್” ಎಂಬ ಸಂಶೋಧನಾ ಪ್ರಬಂಧಕ್ಕೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿಕೆ) ಸುರತ್ಕಲ್ ಪಿ.ಹೆಚ್.ಡಿ ಪದವಿ ನೀಡಿದೆ.
ಇವರು ಸುರತ್ಕಲ್ ಎನ್ಐಟಿಕೆ ಕಾಲೇಜಿನ ಸಿವಿಲ್ ವಿಭಾಗದ ಪ್ರೊಫೆಸರ್ ಗಳಾದ ಡಾ.ಶ್ರೀ ಹರಿ ಹಾಗೂ ಡಾ.ಅರುಣ್ ಕುಮಾರ್ ತಲ್ಲಾ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಪ್ರಸ್ತುತ ಸಿ ಜಿ ಎಸ್ ಗ್ರೀನ್ ಸಸ್ಟೇನರಿ ಪ್ರೈ.ಲಿ ನಲ್ಲಿ ಎನ್ವಿರಾನ್ಮೆಂಟ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಶ್ಮಿಶ್ರೀ ಕೆ ಎನ್ ಇವರು ಸುಳ್ಯ ಕಾಂತಮಂಗಲದ ದಿ. ಪದ್ಮಿನಿ ಕೆ. ರಾವ್ ಹಾಗೂ ದಿ. ನಿರಂಜನ್ ರಾವ್ ಬಹುಮಾನ್ ದಂಪತಿಗಳ ಪುತ್ರಿ. ಬೆಂಗಳೂರಿನ ಜಯಲಕ್ಷ್ಮಿ ಕೆ ಎನ್ ಹಾಗೂ ಪುಟ್ಟರಾಜು ಡಿ ಪಿ ಇವರ ಸೊಸೆ ಹಾಗೂ ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯಲ್ಲಿ ಡಿಸೈನ್ ಎಂಜಿನಿಯರ್ ಆಗಿರುವ ಕೋಮಲೇಶ್ ರಾವ್ ಶಿಂಧೆ ಅವರ ಪತ್ನಿ.