ಆಸ್ಪತ್ರೆಯಿಂದ ಕೇರಳಕ್ಕೆ ಹೋಗಿರುವ ನಿಯಾಝ್

0


ಮುಳ್ಳೇರಿಯಾ ಆಸ್ಪತ್ರೆಗೆ ದಾಖಲು


ಸುಳ್ಯಕ್ಕೆ ಎಸ್‌ಪಿ, ಡಿಎಸ್‌ಪಿ ಆಗಮನ

ಇಂದು ಬೆಳಿಗ್ಗೆ ಬೆಂಗಳೂರಿನಿಂದ ಬರುತ್ತಿರುವ ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳೊಡನೆ ಅನುಚಿತವಾಗಿ ವರ್ತಿಸಿ ಸುಳ್ಯದಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಹಲ್ಲೆಗೊಳಗಾದ ಪಳ್ಳಂಗೋಡಿನ ನಿಯಾಝ್ ಎಂಬ ಯುವಕನನ್ನು ಸುಳ್ಯ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆತ ತನ್ನ ಬಂಧುಗಳೊಂದಿಗೆ ಕೇರಳಕ್ಕೆ ಹೋಗಿ ಮುಳ್ಳೇರಿಯಾದ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಗೊತ್ತಾಗಿದೆ.


ಈ ಪ್ರಕರಣ ನೈತಿಕ ಪೊಲೀಸ್‌ಗಿರಿಯ ಪ್ರಕರಣವೆಂದು ಪರಿಗಣಿತವಾಗಿದ್ದು, ಜಿಲ್ಲೆಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇ ಗೌಡ ಬೆಳಿಗ್ಗೆಯೇ ಸುಳ್ಯ ಠಾಣೆಗೆ ಆಗಮಿಸಿದ್ದು, ಇದೀಗ ಎಸ್‌ಪಿಯವರು ಕೂಡಾ ಬಂದಿದ್ದಾರೆಂದು ತಿಳಿದು ಬಂದಿದೆ.
ಮುಳ್ಳೇರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ನಿಯಾಝ್‌ನ ಹೇಳಿಕೆ ಪಡೆಯಲು ಸುಳ್ಯ ಮತ್ತು ಬೆಳ್ಳಾರೆ ಪೊಲೀಸರು, ಬೆಳ್ಳಾರೆ ಎಸ್‌ಐ ಈರಯ್ಯ ದೂಂತೂರುರವರ ನೇತೃತ್ವದಲ್ಲಿ ತೆರಳಿದ್ದಾರೆ.


ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಪೊಲೀಸರು ವರ್ಷಿತ್, ಮಿಥುನ್, ಗಿರೀಶ್ ಮೊದಲಾದವರು ಠಾಣೆಯಲ್ಲಿ ಪ್ರಶ್ನಿಸುತ್ತಿರುವುದಾಗಿ ತಿಳಿದುಬಂದಿದೆ.