ಪಂಜದ ಪೊಳೆಂಜ-ನೆಕ್ಕಿಲ ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ರವರು ಅಲ್ಪ ಕಾಲದ ಅಸೌಖ್ಯದಿಂದ ಜ.13 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರುಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪೊಳೆಂಜ ಸುದ್ದಿ ಬಿಡುಗಡೆ ಪತ್ರಿಕೆ ಏಜೆಂಟ್ ಹನೀಫ್ ಪಿ, ಇಸ್ಮಾಯಿಲ್ ಪಿ, ಇಬ್ರಾಹಿಂ ಪಿ, ಜಾಕೀರ್ ಹುಸೇನ್ ಪಿ , ಅಶ್ರಫ್ ಪಿ, ಏಳು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.