ಸುಳ್ಯದ ಟೂರಿಸ್ಟ್ ಕಾರು ಮತ್ತು ವ್ಯಾನ್ ನವರು ನಿಗದಿತ ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಹಾಕಿ ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಇದರಿಂದ ನಿಗದಿತ ಸೀಟು ವಾಹನಗಳ ಚಾಲಕ ಮಾಲಕರಿಗೆ ತೊಂದರಯಾಗುತ್ತಿದೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ಪುತ್ತೂರು ಸಾರಿಗೆ ಇಲಾಖೆ ದಾಳಿ ನಡೆಸಿ ಕೆಲವು ಟೂರಿಸ್ಟ್ ವ್ಯಾನ್ ಮತ್ತು ಕಾರು ಚಾಲಕ ಮಾಲಕರಿಗೆ ಕೇಸು ದಾಖಲಿಸಿದ ಘಟನೆ ಜ.11 ರಂದು ನಡೆದಿದೆ.