ಜ.16: ಪುತ್ತೂರು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಗ್ಲಾಕೋಮ ಕಣ್ಣಿನ ತಪಾಸಣಾ ಶಿಬಿರ

0

ಕಣ್ಣಿನ ಕಾಯಿಲೆ “ಗ್ಲಾಕೋಮಾ” ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಸಾದ್ ನೇತ್ರಾಲಯ ಪೂತ್ತೂರು ಆಸ್ಪತ್ರೆಯಲ್ಲಿ ಜನವರಿ 16 ರಂದು ಉಚಿತ ಗ್ಲಾಕೋಮ ತಪಾಸಣಾ ಶಿಬಿರ ನಡೆಯಲಿದೆ.

ಗ್ಲಾಕೋಮ ಕಣ್ಣಿನ ರೋಗದಿಂದ ದೃಷ್ಟಿನರಗಳು ಹಾನಿಗೊಳ್ಳುತ್ತವೆ. ಗ್ಲಾಕೋಮವು ಆರಂಭಿಕ ಹಂತದಲ್ಲಿ ಕೆಲವು ಲಕ್ಷಣಗಳನ್ನು ತೋರಿಸಬಹುದು ಅಥವಾ ತೋರಿಸದೆ ಇರಬದುದು ಕೆಲವೊಮ್ಮೆ ಯಾವ ಮುನ್ಸೂಚನೆಯನ್ನು ಕೂಡ ನೀಡದೆ ಅಂಧತ್ವಕ್ಕೆ ಕಾರಣವಾಗಬಹುದು.

ಕಣ್ಣಿನ ಒಳ ಒತ್ತಡ (ಎಲಿವೇಟೆಡೆ ಇಂಟ್ರಾಕ್ಯುಲರ್ ಪ್ರೆಶರ್) ಗ್ಲಾಕೋಮ ಉಂಟಾಗಲು ಪ್ರಮುಖ ಕಾರಣ ಕುಟುಂಬದಲ್ಲಿ ಗ್ಲಾಕೋಮ ಹೊಂದಿದವರು ಇದ್ದರೆ ಅಂತವರಿಗೆ ಗ್ಲಾಕೋಮಾ ಪಾರಂಪರಿಕವಾಗಿ ಬರಬಹುದು. 40 ಕ್ಕೂ ಹೆಚ್ಚಿನ ವಯಸ್ಸಿನವರಿಗೆ ಇದರ ಅಪಾಯ ಹೆಚ್ಚು ಡಯಾಬಿಟೀಸ್ ಇರುವವರು ಕೂಡಾ ಗ್ಲಾಕೋಮ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅಧಿಕ. ದೀರ್ಘಕಾಲ ಸ್ಟಿರಾಯ್ಡ್ ಬಳಸಿದವರು ಹಾಗೂ ಕಣ್ಣಿಗೆ ಗಾಯವಾಗಿದ್ದವರಿಗೆ ಗ್ಲಾಕೋಮ ತಗಲುವ ಸಾಧ್ಯತೆ ಇರುತ್ತದೆ.

ಪೂತ್ತೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ಜ.16 ಮಂಗಳವಾರದಂದು ಉಚಿತ ಗ್ಲಾಕೋಮಾ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.00ಕ್ಕೆ ಪ್ರಾರಂಭವಾಗುವ ಶಿಬಿರವು ಮಧ್ಯಾಹ್ನ 01.00 ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಉಚಿತ ತಪಾಸಣೆ ಇರುತ್ತದೆ. ಹೆಚ್ಚಿನ ತಪಾಸಣೆ ಅಗತ್ಯ ಕಂಡುಬರುವ ಶಿಬಿರಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ತಪಾಸಣೆ ನಡೆಸಲಾಗುವುದು ಮತ್ತು ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಅಪಾಯಿಂಟ್ ಮೆಂಟ್‌ ಗಾಗಿ 08251470391, 8050466565 ನಂಬರನ್ನು ಸಂಪರ್ಕಿಸಬೇಕು ಎಂದು (ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ರಾಧ ಕೃಷ್ಣ ಬಿಲ್ಡಿಂಗ್, ರಾಧಾ ಕೃಷ್ಣ ಮಂದಿರ ರೋಡ್, ಪೂತ್ತೂರು) ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.