ಬೆಥನಿ ಪದವಿಪೂರ್ವ ಕಾಲೇಜು ನೂಜಿ ಬಾಳ್ತಿಲ ಇಲ್ಲಿನ ದೈಹಿಕ ಶಿಕ್ಷಣ ಉಪನ್ಯಾಸಕ, ಏನೆಕಲ್ಲಿನ ಪುನೀತ್ ಕೆ.ಇ ಕರ್ನಾಜೆ ಅವರಿಗೆ
“ದ.ಕ ಜಿಲ್ಲಾ ಯುವ ಕ್ರೀಡಾ ಸಾಧಕ ಪ್ರಶಸ್ತಿ” ಯನ್ನು ಜ.18 ರಂದು ಪ್ರದಾನ ಮಾಡಲಾಯಿತು.

ಕರ್ನಾಟಕ ಸರಕಾರ, ಜಿಲ್ಲಾಡಳಿತ ದ .ಕ.ಜಿ. ಪಂ. ಮಂಗಳೂರು, ಯು. ಸ. ಮತ್ತು ಕ್ರೀಡಾ ಇಲಾಖೆ ಮಂಗಳೂರು, ಕ. ರಾ. ಯು. ಒಕ್ಕೂಟಗಳ ಸಂಘ ಬೆಂಗಳೂರು, ದ. ಕ. ಜಿ. ಯು. ಒಕ್ಕೂಟ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಸವಣೂರಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ , ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ “ದ. ಕ. ಜಿಲ್ಲಾ ಯುವ ಕ್ರೀಡಾ ಸಾಧಕ ಪ್ರಶಸ್ತಿ ಗೆ ಪ್ರಧಾನ ಮಾಡಲಾಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮತ್ತಿತರರು, ಶಶಿಕುಮಾರ್ ರೈ ಬಾಲ್ಯೋಟ್ಟು ಮತ್ತಿತರರು ಉಪಸ್ಥಿತರಿದ್ದರು.
