ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿ ಸಹಿತ ಅಡುಗೆ

0

ಸ‌.ಹಿ.ಪ್ರಾ ಶಾಲೆ ಮುರುಳ್ಯ ಶಾಂತಿನಗರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಬೆಂಕಿಸಹಿತ ಅಡುಗೆ ಮಾಡುವ ಪಾತ್ಯಕ್ಷತೆ ನಡೆಯಿತು.


ವಿದ್ಯಾರ್ಥಿಗಳೇ ಮನೆಯಿಂದ ಅಡುಗೆ ಸಾಮಾಗ್ರಿ, ಪಾತ್ರೆ ತಂದು ವಿವಿಧ ರೀತಿಯ ತಿಂಡಿಗಳಾದ ಪಾನಿಪೂರಿ, ಕೇಸರಿಬಾತ್, ಗೋಬಿ, ಬಾಳೆಕಾಯಿ ಚಿಪ್ಸ್, ಹರಿವೆ ಪಲ್ಯ, ಕೇಕ್, ಗುಲಂಜಾಂ, ಕಷಾಯ ತಯಾರಿಸಿದರು. ಮುಖ್ಯ ಶಿಕ್ಷಕಿ ಸೀತಾ ವಿ ಮತ್ತು ಶಿಕ್ಷಕರು ಉತ್ತಮ ಪಾಕ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಸುರಕ್ಷೆತೆಯ ಬಗ್ಗೆ ಶಿಕ್ಷಕರು ನಿಗಾ ವಹಿಸಿದರು.


ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ನಡುಬೈಲು ಸೇರಿದಂತೆ ಉಪಾಧ್ಯಕ್ಷೆ ಶ್ರೀಮತಿ ಬೇಬಿ, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.