ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಜಾತ್ರೋತ್ಸವವು ನಡೆಯುತ್ತಿದ್ದು ಭಕ್ತಾದಿಗಳಿಗೆ ಪೆರುವಾಜೆ ಜಲಧಿ ಟ್ರಾವೆಲ್ ಮೇಟ್ ನವರಿಂದ ಉಚಿತ ಸೇವೆ ನೀಡಲಾಯಿತು.
ಬೆಳ್ಳಾರೆ ಪೇಟೆಯಿಂದ ಪೆರುವಾಜೆ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತಾದಿಗಳನ್ನು ವ್ಯಾನ್ ನಲ್ಲಿ ಉಚಿತವಾಗಿ ಕರೆದುಕೊಂಡು ಬರಲಾಯಿತು.
ಪೆರುವಾಜೆ ಬೆಳ್ಳಾರೆಗೆ ಆಗಾಗ ಹೋಗಿ ಬರುತ್ತಿದ್ದ ವಾಹನವನ್ನು ಭಕ್ತಾದಿಗಳು ಸದುಪಯೋಗಪಡಿಸಿಕೊಂಡಿದ್ದು ಉಚಿತ ಸೇವೆ ನೀಡಿದ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.