ಬೆಟ್ಟಂಪಾಡಿ ನೂತನ ಅಂಗನವಾಡಿ ಕೇಂದ್ರದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ವೇದಿಕೆಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ದ ನಾಯ್ಕ್, ಸದಸ್ಯೆ ಕಿಶೋರಿ ಶೇಟ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಚ್. ಸುಧಾಕರ, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ವಿಜಯ ಜೆ.ಡಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಹರಿಣಾಕ್ಷಿ, ರಘುನಾಥ ರೈ,ಶ್ರೀಮತಿ ಶಶಿಕಲಾ, ಶೀಲಾವತಿ ಕುರಂಜಿ, ರಾಜು ಪಂಡಿತ್ ಉಪಸ್ಥಿತರಿದ್ದರು.
ಜಯಶ್ರೀ ಲೋಕೇಶ್ ಬೆಟ್ಟಂಪಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ನಾಗಮ್ಮ ಹಾಗೂ ಮಂಜುನಾಥ ಮೇಸ್ತ್ರಿ ಯವರನ್ನು ಸನ್ಮಾನಿಸಲಾಯಿತು.
ನೇತ್ರಾವತಿ ಮಹಿಳಾ ಮಂಡಲ ಬೆಟ್ಟಂಪಾಡಿ ಪದಾಧಿಕಾರಿಗಳು, ಮಂಜುನಾಥೇಶ್ವರ ಭಜನಾ ಮಂದಿರ ಪದಾಧಿಕಾರಿಗಳು,
ಬಾಲ ವಿಕಾಸ ಸಮಿತಿ ಸದಸ್ಯರು ಸಹಕರಿಸಿದರು.
ಚಂದ್ರರಾವ್ ಬೆಟ್ಟಂಪಾಡಿ ವಂದಿಸಿದರು.