ಯೇನೆಕಲ್ಲು: ಶಿವಪ್ರಸಾದ್ ಮಾದನಮನೆ ಮತ್ತು ರಮೇಶ್ ನಾಯ್ಕ್ ಕಾಂಗ್ರೆಸ್ ನಿಂದ‌ ಬಿಜೆಪಿಗೆ ಸೇರ್ಪಡೆ

0

ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಚುನಾವಣಾ ಕಣದಲ್ಲಿರುವ ಶಿವಪ್ರಸಾದ್ ಮಾದನಮನೆ ಮತ್ತು ರಮೇಶ್ ನಾಯ್ಕ್ ಜ. 11 ರಂದು ಯೇನೆಕಲ್ಲಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಬಿಜೆಪಿ ಧ್ವಜವನ್ನಿತ್ತು ಪಕ್ಷಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಯೇನೆಕಲ್ಲು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಭವಾನಿಶಂಕರ ಪುಂಬಾಡಿ, ಉಪಾಧ್ಯಕ್ಷ ಭರತ್ ನೆಕ್ರಾಜೆ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಾದ ಶಿವಪ್ರಸಾದ್ ನಡ್ತೋಟ, ಸುಜಾತ ಕಲ್ಲಾಜೆ, ಗಿರಿಯಪ್ಪ ಬಾಲಾಡಿ, ದಿಲೀಪ್ ಉಪ್ಪಳಿಕೆ, ಮೋಹನ್ ಗೌಡ ಕೋಟಿಗೌಡನಮನೆ, ಸೂರಪ್ಪ ಬಾಲಾಡಿ, ಮನೀಶ್ ಪದೇಲ, ಶಿವರಾಮ ನೆಕ್ರಾಜೆ, ರೋಹಿತ್ ಹೊಸೋಳಿಕೆ, ಜಯಂತಿ ಪರಮಲೆ, ಮನುದೇವ್ ಪರಮಲೆ, ದಯಾನಂದ ಕುಕ್ಕಪ್ಪನಮನೆ, ಪ್ರಶಾಂತ್ ದೋಣಿಮನೆ, ಪ್ರಹ್ಲಾದ್ ಪರ್ಲ, ಗಿರೀಶ್ ಪದ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.