ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕುಗಳು ಹಾಗೂ ಸಹಕಾರಿ ಸಂಘ, ಸೊಸೈಟಿಗಳ ಮ್ಯಾನೇಜರ್ ಗಳ ಸಭೆಯು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜ.18 ರಂದು ನಡೆಯಿತು.
ಠಾಣಾ ಎಸ್.ಐ.ಈರಯ್ಯ ಡಿ.ಎನ್.ರವರು ಬ್ಯಾಂಕ್ ಅಧಿಕಾರಿಗಳಿಗೆ ಬ್ಯಾಂಕ್ ಭದ್ರತೆಯ ಕುರಿತು ಸೂಕ್ತ ಕಾನೂನು ತಿಳುವಳಿಕೆಯ ಬಗ್ಗೆ ಮಾಹಿತಿ ನೀಡಿದರು.
ಇತ್ತೀಚಿನ ದಿನದಲ್ಲಿ ಕಳ್ಳತನ,ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು ಸಿ.ಸಿ.ಕೆಮರಾ ಅಳವಡಿಕೆ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್,ಸಹಕಾರಿ ಸಂಘದ ಮೆನೇಜರ್ ಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.