ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾರ್ಚ್ 5, 6 ಮತ್ತು 7 ರಂದು ಶ್ರಿವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕೂವಂ ಅಳಕ್ಕಲ್(ಭತ್ತ ಅಳೆಯುವುದು) ಕಾರ್ಯಕ್ರಮ ಜ.17ರಂದು ನಡೆಯಿತು.
ಅಡಯಾಳಂ ಕೊಡುಕ್ಕಲ್(ವೀಳ್ಯ ನೀಡುವುದು) ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಿತು. ಕುಟುಂಬದ ಯಜಮಾನರಾದ ಗುಡ್ಡಪ್ಪ ರೈ ಮೇನಾಲ, ದೈವಂಕಟ್ಟು ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಸ್ನಾನದ ಮನೆ ಅರ್ಚಕರಾದ ಯಂ.ಕೆ. ಕೃಷ್ಣ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಮಿತಿ, ಉಪ ಸಮಿತಿ, ಆಡಳಿತ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.