ನಾಲ್ಕೂರು ಗ್ರಾಮದ ಮಂದಾರ ಬಾಳುಗೋಡು ಎ.ಬಿ.ವಿ.ಪಿ.ಯ ರಾಷ್ಟ್ರೀಯ ಅಧಿವೇಶನದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಇವರು ಗೋರಖ್ ಪುರದಲ್ಲಿ ನ.22 ರಿಂದ ನ.24 ರ ವರಗೆ ನಡೆದ
70 ನೇ ರಾಷ್ಟ್ರೀಯ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರಿನ ವಿಭಾಗ ಸಹ ಸಂಚಾಲಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಸುಬ್ರಹ್ಮಣ್ಯ ದ ಕೆ.ಎಸ್.ಎಸ್ ಕಾಲೇಜಿನ ಪೂರ್ವ ವಿದ್ಯಾರ್ಥಿನಿ. ನಾಲ್ಕೂರು ಗ್ರಾಮದ ಚಂದ್ರಶೇಖರ ಬಾಳುಗೋಡು ಮತ್ತು ಇಂದಿರಾ ದಂಪತಿಗಳ ಪುತ್ರಿ.