ಎಮ್ಮೆಮ್ಮಾಡು ಉರೂಸ್ ಯಾತ್ರಿಕರಿಗೆ ಮೊಗರ್ಪಣೆ ಓಎಸ್ಎ ವತಿಯಿಂದ ತಂಪು ಪಾನಿಯ ವಿತರಣೆ

0

ಕೊಡಗು ಜಿಲ್ಲೆಯ ಎಮ್ಮೆಮ್ಮಾಡು ಉರೂಸ್ ಕಾರ್ಯಕ್ರಮಕ್ಕೆ ತೆರಳುವ ಯಾತ್ರಿಕರಿಗೆ ಮೊಗರ್ಪಣೆ ಓ ಎಸ್ ಎ(ಹಳೆ ವಿದ್ಯಾರ್ಥಿಗಳ ಸಂಘ)ದ ವತಿಯಿಂದ ಉಚಿತ ತಂಪು ಪಾನಿಯ ವಿತರಣೆ ಕಾರ್ಯಕ್ರಮ ಫೆ. 24 ರಂದು ಮೊಗರ್ಪಣೆ ದರ್ಗಾ ಪರಿಸರದಲ್ಲಿ ನಡೆಯಿತು.


ಸಂಘದ ವತಿಯಿಂದ ಪ್ರತೀ ವರ್ಷವೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಇದಕ್ಕೆ ಸ್ಥಳೀಯ ದಾನಿಗಳು ಸಹಾಯ ಸಹಕಾರ ನೀಡುತ್ತಾರೆ.ಸಾವಿರಾರು ಯಾತ್ರಿಕರು ಈ ಪ್ರಯೋಜನವನ್ನು ಪಡೆದು ಕೊಳ್ಳುವ ಮೂಲಕ ಮೊಗರ್ಪಣೆ ಸಯ್ಯಿದ್ ಮಾಂಬ್ಳಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಇಲ್ಲಿಂದ ತೆರಳುತ್ತಾರೆ.

ಈ ಸಂಧರ್ಭದಲ್ಲಿ ಮುಅಲ್ಲಿಮ್ ಮೂಸಾ ಮುಸ್ಲಿಯಾರ್ ಓ ಎಸ್ ಎ ಇದರ ಅಧ್ಯಕ್ಷ ಹನೀಫ್ ಸಂಗಮ್, ಉಪಾಧ್ಯಕ್ಷ ಶರೀಫ್ ಸೀಝ,ಸ್ಥಾಪಕ ಅಧ್ಯಕ್ಷ ಮುನೀರ್ ಸಿಲೋನ್,ಸಂಘದ ಸದಸ್ಯರುಗಳಾದ ಹನೀಫ್ ಪೋಸೋಟ್,ಬಶೀರ್ ಕೆ ಎಂ,ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.