ಗುತ್ತಿಗಾರು ಸೊಸೈಟಿ ಚುನಾವಣೆಯಲ್ಲಿ ಮುಂದಿನ ಪಂಚ ವರ್ಷಗಳಿಗೆ ಬಿಜೆಪಿ ಸಾರಥ್ಯ

0

ಬಿಜೆಪಿ ಬೆಂಬಲಿತ ಸಹಕಾರ ಭಾರತಿ 12 ರಲ್ಲೂ ವಿಜಯ

ವಿಜೇತರು ಪಡೆದ ಮತ ಇಲ್ಲಿದೆ

ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ಜನರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು 12 ರಲ್ಕೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ದಿಗ್ವಿಜಯ ಭಾರಿಸಿ ಮುಂದಿನ ಪಂಚ ವರ್ಷಗಳ ಆಡಳಿತ ಹಿಡಿದಿದೆ.
1484 ಮತ ಚಲಾವಣೆಗೆ ಆಗಿದ್ದು ಅದರಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ವಿಜಯಿಯಾಗಿದೆ.

ಒಟ್ಟಾಗಿ 27 ಮಂದಿ ಚುನಾವಣೆ ಕಣದಲ್ಲಿದ್ದು ಅದರಲ್ಲಿ ಎಲ್ಲವೂ ಸಹಕಾರ ಭಾರತಿ ಪಾಲಾಗಿದೆ.
ಸಹಕಾರಿ ಭಾರತಿಯ 12 ಮಂದಿಯೂ ಬಹುಮತ ಪಡೆದು ವಿಜಯಿಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಸಾಮಾನ್ಯ ಕ್ಷೇತ್ರದಿಂದ
ವೆಂಕಟ್ ದಂಬೆಕೋಡಿ 1090 ಮತ,
ಮುಳಿಯ ಕೇಶವ ಭಟ್ 1025 ಮತ,
ಜಯಪ್ರಕಾಶ್ ಮೊಗ್ರ 792 ಮತ,
ನವೀನ್ ಬಾಳುಗೋಡು 874 ಮತ,
ರವೀಂದ್ರ ಕಾನಾವು ಅಡ್ಡನಪಾರೆ 654 ಮತ, ಪದ್ಮನಾಭ ಮೀನಾಜೆ 710 ಮತ ಪಡೆದು ವಿಜಯ ಸಾದಿಸಿದ್ದಾರೆ.

ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸಹಕಾರಿ ಭಾರತಿಯ ಕೃಷ್ಣಯ್ಯ ಮೂಲೆತೋಟ 827 ಮತ ಪಡೆದು ವಿಜಯಿಯಾಗಿದ್ದಾರೆ.
ಹಿಂದುಳಿದ ಬಿ ಕ್ಷೇತ್ರದಿಂದ
ಸಹಕಾರ ಭಾರತಿಯ ವಿನ್ಯಾಸ್ ಕೊಚ್ಚಿ 1054 ಮತ ಪಡೆದು ವಿಜಯಿಯಾಗಿದ್ದಾರೆ.

ಮಹಿಳಾ ಕ್ಷೇತ್ರದಿಂದ
ಸಹಕಾರ ಭಾರತಿಯ
ತಿಲಕ ಕೋಲ್ಯ974 ಮತ, ವಿನುತಾ ಜಾಕೆ 829 ಮತ ಪಡೆದು ವಿಜಯಿಯಾಗಿದ್ದಾರೆ.
ಪರಿಶಿಷ್ಟ ಪಂಗಡದಿಂದ
ಸಹಕಾರ ಭಾರತಿಯ
ಜನಾರ್ದನ ನಾಯ್ಕ ಅಚ್ರಪ್ಪಾಡಿ 969ಮತ ಪಡೆದು ವಿಜಯಿಯಾಗಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸಹಕಾರಿ ಭಾರತಿಯ ಕುಂಞ ಬಳ್ಳಕ್ಕ 994 ಮತ ಪಡೆದು ವಿಜಯಿಯಾಗಿದ್ದಾರೆ.