ಕಲ್ಮಡ್ಕ ಗ್ರಾಮದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿ ಫೆ. 25ರಂದು ನಡೆಯಲಿದೆ.
ಫೆ. 25ರಂದು ಬೆಳಿಗ್ಗೆ ಗಣಪತಿ ಹವನ, ವಿವಿಧ ವೈದಿಕ ಕಾರ್ಯಗಳು, 10.30ರಿಂದ ಶ್ರೀರಾಮ ಭಜನಾ ಮಂಡಳಿ ಕಾಚಿಲ ಮತ್ತು ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ, ಶ್ರಿ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆದು ಮೇಲೇರಿಗೆ ಅಗ್ನಿ ಸ್ಪರ್ಶ, ಬಳಿಕ ಶ್ರೀರಾಮ ಭಜನಾ ಮಂಡಳಿ ಕಾಚಿಲ, ಶ್ರೀ ಶಾರದಾಂಭಾ ಭಜನಾ ಮಂಡಳಿ ಪಂಜ, ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.



ರಾತ್ರಿ 10.30ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು, ಫೆ. 26ರಂದು ಪ್ರಾತಃ ಕಾಲ 5.00ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಬಳಿಕ ಮಾರಿಕಳ, ಪ್ರಸಾದ ವಿತರಣೆ ನಡೆದು ಶ್ರೀ ಮುಳ್ಳುಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ.