ಪ್ರತಿಭೆಯಲ್ಲಿ ಅವರೊಬ್ಬ ಚಿರಂಜೀವಿ: ಚಂದ್ರಹಾಸ ಶಿವಾಲ

ಯೌವ್ವನದ ದಿನಗಳಲ್ಲಿ ರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಂಡ ದೇವದುರ್ಲಬ ಬಿಜೆಪಿ ಕಾರ್ಯಕರ್ತನಾಗಿ ಗೋ ಮಾತೆ ರಕ್ಷಣೆ, ಹಿಂದುತ್ವದ ಪ್ರತಿಪಾದಕನಾಗಿ ಸಮಾಜ ಹಿತದೊಂದಿಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕ್ರತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ದಿ. ನಾರಾಯಣ ಭೀಮಗುಳಿ ಯುವ ಶಕ್ತಿಯಾಗಿದ್ದರು. ಪ್ರತಿಭೆಯಲ್ಲಿ ಅವರು ಚಿರಂಜೀವಿ ಆಗಿದ್ದರು ಎಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಟ್ರಸ್ಟಿ ಚಂದ್ರಹಾಸ ಶಿವಾಲ ಹೇಳಿದರು.

ಇತ್ತೀಚೆಗೆ ನಿಧನ ಹೊಂದಿದ ನಾರಾಯಣ ಭೀಮಗುಳಿ ಅವರಿಗೆ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಂಗಣದಲ್ಲಿ ಫೆ.23 ನಡೆದ ವೈಕುಂಠ ಸಮಾರಾಧನೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು. ದೇಗುಲದಲ್ಲಿ ಈ ಹಿಂದೆ ನಡೆದ ಬ್ರಹ್ಮಕಲಶದಲ್ಲಿ ಅವಿರತ ಸೇವೆ ಸಲ್ಲಿಸಿದ್ದರು. ಅವರೊಬ್ಬ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು ಎಂದು ಹೇಳಿ ಕಾರ್ಯಕರ್ತರಾಗಿದ್ದ ಸಂದರ್ಭದ ಒಡನಾಟವನ್ನು ಸ್ಮರಿಸಿದರು. ಕುಟುಂಬದ ಮೂರು ಮಂದಿ ಸಹೋದರರು ಕೂಡ ಒಬ್ಬರಿಗಿಂತ ಒಬ್ಬರು ಮೇಲು ಎನ್ನುವಂತೆ ಪ್ರತಿಭಾನ್ವಿತರು. ಮನೆಗಷ್ಟೆ ಸೀಮಿತವಾಗದೆ ಸಮಾಜಕ್ಕೆ ಅವರು ಮೂವರು ಆಸ್ತಿಯಾಗಿದ್ದಾರೆ ಎಂದರು.



ವಿಶ್ವನಾಥ ಮುಂಡೋಡಿ ನುಡಿನಮನ ಸಲ್ಲಿಸಿ, ನಾಟಕ, ಯಕ್ಷಗಾನ ಕಲಾವಿದನಾಗಿದ್ದ ನಾರಾಯಣ ಭೀಮಗುಳಿ ಬಹುಮುಖ ಪ್ರತಿಭೆ. ಯಕ್ಷಗಾನ ಕಲಾಸಂಘದ, ಶಿವಶಕ್ತಿ ಬಳಗದ ಸ್ಥಾಪಕಾದ್ಯಕ್ಷರಾಗಿ ಸಂಘಟನೆ ಚತುರ.ಮಾತಿನ ಮೋಡಿಯಿಂದ ಎಲ್ಲರನ್ಬು ತನ್ಬೆಡೆಗೆ ಸೆಳೆಯುವ ವಿಶೇಷ ಗುಣವುಳ್ಳ ವ್ಯಕ್ತಿ ಅವರಲ್ಲಿತ್ತು..ಯುವ ಬರಹಗಾರ, ಪತ್ರಕರ್ತರಾಗಿದ್ದ ಅವರು ನಾಟಕ ಅಭಿನಯವಷ್ಟೆ ಅಲ್ಲ ನಾಟಕ ರಚನೆ ಮಾಡಿ ನಟಿಸುತಿದ್ದರು. ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು ಎಂದು ಗುಣಗಾನ ಮಾಡಿದರು.
ಮೃತರ ತಂದೆ ಪುಟ್ಟಣ್ಣ ಗೌಡ. ಪತ್ನಿ ಭವಾನಿ, ಪುತ್ರಿ ಹರ್ಷಿತಾ, ಪುತ್ರ ವಿನೀತ್, ಇಬ್ವರು ಸಹೋದರರು, ಕುಟುಂಬಸ್ಥರು, ಬಂಧು ಬಳಗದವರು ಉಪಸ್ಥಿತರಿದ್ದು ಅಗಲಿದ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ನುಡಿನಮನ ಸಲ್ಲಿಸಿದರು.