ಫೆ.1 ಮತ್ತು ಫೆ. 2: ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ
ಫೆ.1 ಮತ್ತು ಫೆ.2 ರಂದು ನಡೆಯಲಿದೆ.

ಫೆ. 1ರ ಬೆಳಿಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ನವ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವುದು ಮತ್ತು ಚೆಂಡೆವಾದನ ನಡೆಯಲಿದೆ. ರಾತ್ರಿ ಗಂಟೆ 8-00ಕ್ಕೆ ದೇವರ ಉತ್ಸವ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದ್ದು ರಾತ್ರಿ ಅನ್ನಸಂತರ್ಪಣೆಯೂ ನಡೆಯಲಿದೆ.

ಫೆ.2. ಬೆಳಿಗ್ಗಿನ ಜಾವ 5.00ಕ್ಕೆ ಉಳ್ಳಾಕ್ಲು -ಉಳ್ಳಾಲ್ತಿ ನೇಮ ನಡೆದು ಕುಮಾರ ದೈವದ ನೇಮ ನಡೆಯಲಿದೆ. ಬೆಳಗ್ಗೆ ಗಂಟೆ 8-00 ಕ್ಕೆ ಶ್ರೀ ದೇವರಿಗೆ ಪೂಜೆ ಯ ಬಳಿಕ ರಕೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಸಂಜೆ ಗಂಟೆ 5-00 ಕ್ಕೆ ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.