ಸುಬ್ರಹ್ಮಣ್ಯ: ಕೆ.ಎಸ್.ಆರ್.ಟಿ.ಸಿ ನಿಲ್ದಾಣದ ಕಾಂಕ್ರೀಟ್ ರಸ್ತೆ ಪೂರ್ಣ, ಸಂಚಾರಕ್ಕೆ ತೆರವು

0

ಬಹುಕಾಲದ, ಅತಿ ಅಗತ್ಯದ ಬೇಡಿಕೆ ಈಡೇರಿಕೆ

ಕಳೆದ ಹಲವು ದಿನಗಳಿಂದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಬಂದಾಗಿದ್ದ ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ ರಸ್ತೆ ಕೆಲಸ ಪೂರ್ಣಗೊಂಡು ಜ.28 ರಿಂದ ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಬ್ರಹ್ಮಣ್ಯದ ಬಹುತೇಕ ರಸ್ತೆ ಅಭಿವೃದ್ಧಿ ಗೊಂಡರೂ ಈ ರಸ್ತೆ ಅಭಿವೃದ್ಧಿ ಗೊಂಡಿರಲಿಲ್ಲ. ಕೆ.ಎಸ್.ಆರ್ . ಟಿ ಯ ಈಗಿನ ಸ್ಥಳ ಒಂದು ಕಾಲದಲ್ಲಿ ದೇವಸ್ಥಾನದ ಭೂಮಿಯೇ ಆಗಿದ್ದರೂ ದೇವಸ್ಥಾನದಿಂದ ದಾನವಾಗಿ ಪಡೆದು ಈಗ ಕೆ.ಎಸ್.ಆರ್ . ಟಿ ಯ ಆಸ್ತಿಯಾಗಿದೆ. ಆದರೆ ಇದರ ಅಭಿವೃದ್ಧಿ ಮರೀಚಿಕೆಯಾಗಿತ್ತು. ಕೆ.ಎಸ್.ಆರ್.ಟಿ.ಸಿ ತಂಗುದಾಣ ರಸ್ತೆ ಅವ್ಯವಸ್ಥೆಯ ಬಗ್ಗೆ ಸುದ್ದಿ ಮಾಧ್ಯಮಗಳು ಹಲವು ಭಾರಿ ವರದಿ ಮಾಡಿರುವುದನ್ನು ಈ ಸಂದರ್ಭ ನೆನಪಿಸಬಹುದಾಗಿದೆ. ಇಲ್ಲಿನ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಕೆಲಸ ಮಾಧ್ಯಮ ಮಾಡಿತ್ತು. ಈ ವರ್ಷದ ಷಷ್ಠಿ ಮಹೋತ್ಸವ ಸಂದರ್ಭದ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಷಷ್ಠಿಯ ಬಳಿಕ ಕೆಲಸ ಪೂರ್ಣ ಗೊಳಿಸುವ ಭರವಸೆ ನೀಡಿದ್ದರು. ಒಟ್ಟಿನಲ್ಲಿ ಇತ್ತೀಚೆಗೆನಿಂದ ಕೆ.ಎಸ್.ಅರ್. ಟಿ ತಂಗುದಾಣಕ್ಕೆ ಬಸ್ ತೆರಳದೆ ತೊಂದರೆ ಪಡುತಿದ್ದವರೆಲ್ಲಾ ನಿಟ್ಟುಸಿರು ಪಡುವಂತಾಗಿರುವುದು ಸಂತಸ ಮೂಡಿಸಿದೆ.