ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇ.ವಿ.ಯಂ ಮೆಷಿನ್ ಬದಲಿಗೆ ಬ್ಯಾಲೆಟ್ ಪೇಪರ್ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟು ರೈತ ಮುಖಂಡರಾದ ಅರಂಬೂರಿನ ದಿವಾಕರ ಪೈ ಯವರು ಫೆ.8 ರಂದು ಸಂಪಾಜೆ ಗೇಟ್ ಬಳಿಯಿಂದ ಸುಳ್ಯದ ತನಕ ಪಾದಯಾತ್ರೆ ನಡೆಸುವುದಾಗಿ ತಿಳಿದು ಬಂದಿದೆ.
ರೈತ ಸಂಘದ ವತಿಯಿಂದ ಸಾರ್ವಜನಿಕವಾಗಿ ಪಾದಯಾತ್ರೆಗೆ ಇಲಾಖೆಯಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಪಾದಯಾತ್ರೆ ನಡೆಸುವ ತೀರ್ಮಾನಕ್ಕೆ ಮುಂದಾಗಿರುವುದಾಗಿ ತಿಳಿದು ಬಂದಿದೆ. ಸಂಜೆ ಸುಮಾರು 4 ಗಂಟೆಗೆ ಸುಳ್ಯ ತಾಲೂಕು ಕಚೇರಿ ಬಳಿ ಸೇರಿ ತಹಶೀಲ್ದಾರ್ ರವರಿಗೆ ಮನವಿ ನೀಡಲಿದ್ದಾರೆ.