ಮಾ.8 – 9: ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ಪ್ರತಿಷ್ಠಾ ವಾರ್ಷಿಕೋತ್ಸವ

0

ಸುಳ್ಯಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ.8 ಮತ್ತು 9ರಂದು ಜರುಗಲಿದೆ.

ಮಾ.6ರಂದು ದೇವಸ್ಥಾನದ ಪಾಷಾಣಮೂರ್ತಿ ಅಮ್ಮನವರ ಸನ್ನಿಧಿಯಲ್ಲಿ ವಾರ್ಷಿಕೋತ್ಸವವು ಜರುಗಲಿದೆ.

ಮಾ.8ರಂದು ಬೆಳಿಗ್ಗೆ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಗಣಪತಿ ಹೋಮ, ದೇವರಗುಂಡಿಯಿಂದ ತೀರ್ಥ ತರುವುದು. ಬಳಿಕ ಏಕದಶ ರುದ್ರಾಭಿಷೇಕ ಮತ್ತು ತಂತ್ರಿವರ್ಯರಿಂದ ಪಂಚ ವಿಂಶತಿ ಕಲಶಾಭಿಷೇಕ, ಸಂಜೆ ರಾಶಿಪೂಜೆ, ರುದ್ರಾಭಿಷೇಕ, ರಂಗಪೂಜೆ ಜರುಗಲಿದ್ದು, ಬಳಿಕ ಶ್ರೀ ದೇವರ ಉತ್ಸವ ಬಲಿ ಹೊರಡುವುದು. ಮಾ.9ರಂದು ಬೆಳಿಗ್ಗೆ ದರ್ಶನಬಲಿ, ಬಟ್ಟಲುಕಾಣಿಕೆ ಜರುಗಲಿದೆ. ಈ ಎರಡೂ ದಿನಗಳಲ್ಲಿ ಶ್ರೀ ದೇವರಿಗೆ ತುಲಾಭಾರ ಸೇವೆ ನಡೆಯಲಿದೆ.